|| ಶಿವ ಸ್ತುತಿ ||
ರಾಗ :- ಕಾಂಬೋಧಿ
ತಾಳ :- ಛಾಪು
|| ಭಜನೆ ಮಾಡುವ ಬನ್ನಿರೋ | ಸದಾಶಿವನಾ | ಭಜನೆ ಮಾಡುವ ಬನ್ನಿರೋ ||
ಭಜನೆ ಮಾಡುವ ನಿತ್ಯ | ಸುಜನರೆಲ್ಲರೂ ಕೂಡಿ ||
ಕುಜನ ಸಂಗವ ದೂರ ಮಾಡಿ | ಸದ್ಭಕ್ತಿಯಲಿ | ಭಜನೆ ಮಾಡುವ ಬನ್ನಿರೋ ||
|| ಶತಕೋಟಿ ಪಾಪವನು | ಮಾಡಿರುವಂಥ | ಪತಿತರು ನಾವು ನೀವು ||
ಪತಿತಿ ಪಾವನನೆಂಬೊ | ಬಿರುದುಳ್ಳ ದೇವನು ||
ಕ್ಷಿತಿಯೊಳುತ್ತಮ ಗತಿ | ತೋರೆಂದು ಶಿವನಾ ||
|| ಭಜನೆ ಮಾಡುವ ಬನ್ನಿರೋ ||
|| ಘುಡಿ ಘುಡಿಸುತ ಬರುವ | ಯಮನಾಳ್ಗಳ ಕಡಿದು ಮಾಡುತ ಕೋಪವ ||
ಝಡಿದು ಶೂಲದಿ | ಭಕ್ತರನು ಕೈಯಾ ಪಿಡಿದು | ಕಡು ಕಾರುಣ್ಯದಿ
ಪೊರೆಯುವ | ಮೃತ್ಯುಂಜಯನಾ || 1 ||
|| ಪಂಚ ವಿಶಂತಿ ತತ್ವದಿ | ತಾನಿರ್ದು ಪ್ರಪಂಚದೊಳಾನಂದದೀ ||
ಪಂಚ ವಿಶಂತಿ ಲೀಲೆ | ತೋರಿ ತನ್ನ ಭಕ್ತರ |
ಸಂಚಿತ ಕರ್ಮವನರುಹಿದ ಶಿವನಾ || 2 ||
ಕಷ್ಟ ಕರ್ಮಗಳ ನೋಡಿ | ನಿಮಿಷಾರ್ಧದಲಿ | ಸುಟ್ಟು ನಿರ್ಮೂಲನವ ಮಾಡಿ ||
ಇಷ್ಟಾರ್ಥಗಳನಿತ್ತು ಕರುಣಾದಿ ಪಾಲಿಪ | ಅಷ್ಟ ದಳದ ಪದ್ಮದಲ್ಲಿರುವ ಶಿವನಾ ||
|| ಭಜನೆ ಮಾಡುವ ಬನ್ನಿರೋ||
0 ಕಾಮೆಂಟ್‌ಗಳು