ಪಾಪಿಯ ಜೀವನ ಪಾವನಗೊಳಿಸುವ -- Papiya jeevana paavanagolisida bhajan lyrics in kannada

|| ಶಿವ ಸ್ತುತಿ ||

Shiva Bhajan -- Papiya jeevana pavanagolisida bhajan lyrics in kannada, belaguru bhajan lyrics, kannada bhajan lyrics, papiya jeevana paavanagolisida bhajan lyrics in kannada
ರಾಗ :- ಕಾಮವರ್ಧಿನಿ
ತಾಳ :- ಆದಿ

|| ಪಾಪಿಯ ಜೀವನ | ಪಾವನಗೊಳಿಸುವ | ಪರಶಿವ ಲಿಂಗ ನಮೋ ||
ಹರ ಹರ ಶಂಭೋ | ಮಹದೇವಾ || ಶಿವ ಶಿವ ಶಂಭೋ ಮಹದೇವಾ ||

|| ತನುಮನ ಧರಿಸಿದೆ | ಕರ್ಮದ ಕೂಪಾ | ಜನುಮ ಜನುಮ ಕೂಗಳಿಸಿದೆ ಪಾಪ ||
ನೆರೆ ತಾನಾದುದು | ವಿಷದ ದೀಪ | ಅನುಭವಿಸಿದೆ ನಾನತಿಶಯ ಪಾಪ ||
ಕೊನೆಗಾಣಿಸಲು ಈ ಕರ್ಮದ ಲೇಪ ಪೊರೆಚಿನ್ಮಯರೂಪ |
ಹರ ಹರ ಶಂಭೋ ಮಹಾದೇವಾ ||

|| ನೀರಿನ ಮೇಲಿನ ಗುಳ್ಳೆಯ ತರದೀ | ಮೂರುದಿನದ ಈ ಬಾಳಿದು ಜಗದಿ ||
ಹೇಳದೆ ಕೇಳದೆ ಬರುವುದು ಮರಣ | ಕಾಲನ ಪಾಶದ ಕಂಠಾಭರಣ ||
ಬೆಳೆದ ಕೂಡಲೆ ನಿನ್ನೊಳು ಭಕುತಿ | ಗಳಿಸುವ ನರ ತಾ ಪರಮ ವಿರಕ್ತಿ ||
ಕರುಣಿಸು ಭಕ್ತಿ | ನೀಡು ವಿರಕ್ತಿ | ಕೊಡು ಜೀವನ್ಮುಕ್ತಿ ||
ಹರ ಹರ ಶಂಭೋ ಮಹಾದೇವ | ಶಿವ ಶಿವ ಶಂಭೋ ಮಹಾದೇವಾ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು