|| ಶಿವ ಸ್ತುತಿ ||
belaguru bhajan lyrics in kannada, kannada bhajan lyrics, ella roopavu thananthe bhajan lyrics |
ರಾಗ :- ಕಲ್ಯಾಣಿ
ತಾಳ :- ಆದಿ
||ಎಲ್ಲಾ ರೂಪವು ತಾನಂತೆ|ಶಿವ|ಎಲ್ಲೆಲ್ಲೂ ತುಂಬಿಹನಂತೆ ||
ಅಲ್ಲಲ್ಲರಸುತ ಗುಡಿಗಳ ತಿರುಗುವ|ಕಳ್ಳರ ಕಣ್ಣಿಗೆ ಕಲ್ಲಂತೆ ||
||ದೃಶ್ಯ ವಿದಾದವ ತಾನಂತೆ|ದೃಶ್ಯವನರಿವನು ತಾನಂತೆ ||
ದೃಶ್ಯಾ ದೃಷ್ಠಿನೊಳೆರಡರ ನಡುವೆ|ಶಾಶ್ವತನಾದವ ತಾನಂತೆ||
||ಕಳವಳಗಳು ತನಗಿಲ್ಲಂತೆ | ಮೊಳೆಯುವದಿನ್ನೊಂದಿಲ್ಲಂತೆ||
ಒಳಹೊರನುದಿಸುವ|ಕಲ್ಪಿತ ರೂಪವ|ಬೆಳಗಿಸಿ ತಾ ಬೆಳಗುವನಂತೆ||
||ಕಣ್ಣೆಂಬುದು ತನಗಿಲ್ಲಂತೆ|ಕಣ್ಣಿಗೆ ಕಣ್ಣಾಗಿಹನಂತೆ ||
ಮಂಕನು ಬಿಡಿಸುತ|ಕಿಂಕರರಿಗೆ|ಗುರು|ಶಂಕರನಾದವ ತಾನಂತೆ ||
|| ಎಲ್ಲಾ ರೂಪವು ತಾನಂತೆ | ಶಿವ | ಎಲ್ಲೆಲ್ಲೂ ತುಂಬಿಹನಂತೆ ||
ಅಲ್ಲಲ್ಲರಸುತ ಗುಡಿಗಳ ತಿರುಗುವ|ಕಳ್ಳರ ಕಣ್ಣಿಗೆ ಕಲ್ಲಂತೆ ||
0 ಕಾಮೆಂಟ್‌ಗಳು