|| ಶಾರದಾ ಸ್ತುತಿ ||
ರಾಗ :- ಉದಯರವಿಚಂದ್ರಿಕೆ
ತಾಳ :- ಆದಿ
|| ಇವಳೇ ವೀಣಾಪಾಣಿ | ವಾಣಿ | ತುಂಗಾ ತೀರ ವಿಹಾರಿಣಿ ||
ಶೃಂಗೇರಿ ಪುರ ವಾಸಿನಿ || ಇವಳೇ ||
|| ಶಾರದ ಮಾತೆ | ಮಂಗಳ ದಾತೆ | ಸುರ ಸಂಸೇವಿತೆ | ಪರಮ ಪುನೀತೆ ||
ವಾರಿಜಾಸನಾ | ಹೃದಯ ವಿರಾಜಿತೆ | ನಾರದ ಜನನೀ | ಸುಜನ ಸಂಪ್ರೀತೇ ||
|| ಇವಳೇ ವೀಣಾಪಾಣಿ ||
|| ಆದಿ ಶಂಕರ | ಅರ್ಚಿತೆ ಮಧುರೆ | ನಾದಪ್ರಿಯೇ ನವ | ಮಣಿಮಯ ಹಾರೇ ||
ವೇದ ಅಖಿಲ ಶಾಸ್ತ್ರ | ಆಗಮ ಸಾರೇ | ವಿದ್ಯಾ ದಾಯಿನಿ | ಯೋಗ ವಿಚಾರೇ ||
|| ಇವಳೇ ವೀಣಾಪಾಣಿ ||
0 ಕಾಮೆಂಟ್‌ಗಳು