ಅಂಬಾ ನೀ ಜಾಣೆ -- Amba nee jaane

Devi bhajan -- Amba nee jaane song lyrics in kannada,belaguru bhajan lyrics,kannda bhajan lyrics
belaguru bhajan lyrics,kannada bhajan lyrics,amba nee jaane song lyrics in kannada

|| ದೇವಿ ಸ್ತುತಿ ||

ರಾಗ :- ಕಲ್ಯಾಣಿ

ತಾಳ :- ಆದಿ


ಪ     ||ಅಂಬಾ ನೀ ಜಾಣೆ | ನಂಬಿದೆನು ಕಾಣೆ ||
ಇಂಬಿಲ್ಲಾದೀ ಲೋಕವೆಲ್ಲಾ | ತುಂಬಿಕೊಂಡೆ ನೀನೇ || ಅಂಬಾ ||

|| ಮಾಯೆಯು ನೀನೇ | ಮಹಾಮಾಯೆ ನೀನೇ ||
ಮಹಿಷಾಸುರ ನೆಂಬೊ | ದೈತ್ಯನ | ಕೊಂದುಬಿಟ್ಟೆ ಕಾಣೆ ||  ಅಂಬಾ  ||

1.   || ಕಾಳಿಯು ನೀನೇ | ಮಹಂಕಾಳಿ ನೀನೇ ||
ಕಾಕಾಸುರ ನೆಂಬೊ ದೈತ್ಯನ | ಕೊಂದುಬಿಟ್ಟೆ ಕಾಣೆ ||  ಅಂಬಾ   ||

2.   ಶಕ್ತಿಯು ನೀನೇ | ಆದಿಶಕ್ತಿಯು ನೀನೇ ||
ರಕ್ತಬೀಜ ನೆಂಬೊ ದೈತ್ಯನ | ಕೊಂದುಬಿಟ್ಟೆ ಕಾಣೆ ||  ಅಂಬಾ  ||

3. || ಚಂಡಿಯು ನೀನೇ | ಚಾಮುಂಡಿಯು ನೀನೇ ||
ಚಂಡಮುಂಡರೆಂಬೋ | ದೈತ್ಯರ ಕೊಂದುಬಿಟ್ಟೆ ಕಾಣೆ ||
ಕೊಂದು ಬಿಟ್ಟೆ ಕಾಣೆ | ನೀ ತಿಂದು ಬಿಟ್ಟೆ ಕಾಣೆ ||

4.   || ಹೆಣ್ಣು, ಮಣ್ಣು ಹೊನ್ನು ಮೂರು | ನಿನ್ನ ಮಾಯೆ ಕಾಣೆ ||
ನಿನ್ನ ಮಾಯೆ ಕಾಣೆ | ನಾ ತಿಳಿಯಲಾರೆ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು