ಹಿಗ್ಗುವೆ ಯಾಕೋ ಈ ದೇಹಕೆ -- Higguve yako song lyrics in kannada

Purandara dasara kruthi -- Higguve yako song lyrics in kannada,belaguru bhajan lyrics,kannada bhajan lyrics
belaguru bhajan lyrics, kannada bhajan lyrics, higguve yako song lyrics in kannada

|| ತತ್ವ ಪದ ||

ರಾಗ :- ಮೋಹನ

ತಾಳ :- ಛಾಪು

 ||ಹಿಗ್ಗುವೆ ಯಾಕೋ|ಈ ದೇಹಕೆ|ತಗ್ಗುವೆ ಯಾಕೋ ||

ಹಿಗ್ಗುವೆ ತಗ್ಗುವೆ | ಮುಗ್ಗುವೆ ಮರುಗುವೆ ||ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಾ ||

||ಹಿಗ್ಗುವೆ ಯಾಕೋ||


1.    || ಸತಿ ಪುರುಷರು ಕೂಡಿ | ರತಿ ಕ್ರೀಡೆಗಳನಾಡಿ ||
ಪತನವಾದಿಂದ್ರಿಯ |ಪ್ರತಿಮೆಯ ದೇಹಕೆ 
||ಹಿಗ್ಗುವೆ ಯಾಕೋ||

2.       || ಆಗದ ಭೋಗದ|ಆಗೂ ಮಾಡುತಲಿದ್ದು ||
ರೋಗ ಬಂದರೆ ಉರುಳಿ|ಹೋಗುವ ದೇಹಕ್ಕೆ
||ಹಿಗ್ಗುವೆ ಯಾಕೋ||

3.    || ಸೋರುವ ದೊಂಬತ್ತು|ಬಾಗಿಲ ಬಿಲದೊಳು ||
ನೀರಿಲ್ಲದಿದ್ದರೆ|ನಾರುವ ದೇಹಕ್ಕೆ || 
 ||ಹಿಗ್ಗುವೆ ಯಾಕೋ||

4.     || ಪುರಂದರ ವಿಠಲನ ಚರಣ ಕಮಲಕ್ಕೆ ||
ಎರಗದೆ ಇರುತಿಹ ಗರುವದ ದೇಹಕ್ಕೆ ||  
 ||ಹಿಗ್ಗುವೆ ಯಾಕೋ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು