belaguru bhajan lyrics, kannada bhajan lyrics, thaandava nruthya hare song lyrics |
|| ಗಣಪತಿ ಸ್ತುತಿ ||
ರಾಗ :- ತಿಲಂಗ್
ತಾಳ :- ಆದಿ
|| ಧಿಮಿಕಿಟ ಧಿಮಿಕಿಟ | ತಾಳ ಮೃದಂಗ |
ಬ್ರಹ್ಮ ತಾಳ ಹರೇ ಗಜಾನನ ||
ತಾಂಡವ ನೃತ್ಯ ಹರೇ | ಗಜಾನನ |
ತಾಂಡವ ನೃತ್ಯ ಹರೇ || ಪ ||
1. || ಮೂಷಕ ವಾಹನ | ದೋಷ ನಿವಾರಣ |
ಪಾಶಾಂಕುಶಧರನೇ | ಗಜಾನನ ||
ತಾಂಡವ ನೃತ್ಯ ಹರೇ ||
2. ಶಂಕರ ಪುತ್ರ | ಸುರನರ ಸ್ತೋತ್ರ |
ಮಾತೇ ಶಿವಗೌರಿ | ಗಜಾನನ ||
ತಾಂಡವ ನೃತ್ಯ ಹರೇ ||
3. || ಸುರವರ ಶಂಕರ | ಗಿರಿಜೆ ಮನೋಹರ ||
ಸುರುಚಿರ ವರ ಕುವರ | ಲಂಬೋಧರ ||
ತಾಂಡವ ನೃತ್ಯ ಹರೇ ||
4. || ಅಂದಿನ ದಿನದೊಳು | ಚಂದ್ರಗೆ ಶಾಪವ |
ಚೆಂದದಿ ನೀ ಕೊಟ್ಟೆ | ಗಜಾನನ ||
ತಾಂಡವ ನೃತ್ಯ ಹರೇ ||
5. || ಧರೆಯೊಳು ನಾರದ | ಪುರದೊಳ್ ನೆಲೆಸಿದ |
ಕರಿ ಮುಖನೇ ಪೊರೆಯೈ | ಗಜಾನನ ||
ತಾಂಡವ ನೃತ್ಯ ಹರೇ ||
0 ಕಾಮೆಂಟ್‌ಗಳು