belaguru bhajan lyrics-kannada bhajan lyrics, poreyenna prabhuve song lyrics in kannada |
|| ಗುರು ಸ್ತುತಿ ||
ರಾಗ :- ಶಂಕರಾಭರಣ
ತಾಳ :- ಛಾಪು
|| ಪೊರೆಯೆನ್ನ ಪ್ರಭುವೇ | ಶ್ರೀ ಗುರುವೆಂಬೊ | ವರ ಕಲ್ಪತರುವೇ ||
ಕರುಣಾ ಕಟಾಕ್ಷ ವೀಕ್ಷಣದಿಂದಲೆನ್ನೆಯ |
ದುರಿತ ದುರ್ಗುಣವೆಣಿಸದೇ ಕೃಪೆಯಿಂದಲೀ ||
1. || ಗುರುಬಂಧು ಮಿತ್ರ | ಗೋತ್ರವೇ ಸೂತ್ರ | ಗುರುವೇ ಪವಿತ್ರ ||
ಗುರುಬ್ರಹ್ಮ | ಗುರುವಿಷ್ಣು | ಗುರುಪರ ಶಿವನೆಂದು ||
ವರಲುವ ಶೃತಿನಂಬಿ | ನಿಮ್ಮೊಳು ನಂಬಿದೆ ||
2. || ತಂದೆ ||
ಎಂದಿದ್ದರೆಮ್ಮನು | ಬಿಟ್ಟು ಹೋಗುವರು ನೀವು ||
ಎಂದೆಂದೂ ಬಿಡನಲ್ಲೆಂದೆನುತ | ನಂಬಿಹೆನಯ್ಯಾ ||
3. || ನಾರಿ ಮಕ್ಕಳನು | ತನುಮನವೆಂಬ | ಭೂರಿಭಾಗ್ಯವನು ||
ಮೀರಿದ | ಮಾನಾಭಿ | ಮಾನಾ ಹೆಚ್ಚಿಸಿಕೊಟ್ಟೆ ||
ಹೇರನೊಪ್ಪಿಸಿದವನಿಗೆ | ಸುಂಕ ಉಂಟೇ ||
4. || ಸಗುಣ ನಿರ್ಗುಣನೇ | ನಿರ್ಮಲನೇ | ನಿಗಮ ವಂದಿಪನೇ |
ಅಗಣಿತ ಕಲ್ಮಷವಳಿದು | ಪಾಲಿಸುವವನೇ ||
ಸುಗುಣ ಮುಕ್ತಿಯ ಗಣಿ | ವರ ಚಿಂತಾಮಣಿಯೇ ||
5. || ಸಿರಿಸೊಬಗೆಂಬೋ | ಮೋಹವೆ ದುಃಖ | ದುರಿತವೆಂಬೋ ||
ಶರಧಿಯ ದಾಂಟಿಸಿ | ಮುಕ್ತಿ ಪಾಲಿಪನೆಂಬೋ ||
ಬಿರುದು ಪೊತ್ತಿಹ | ಗುರು | ಮಹಲಿಂಗ ರಂಗನೇ ||
0 ಕಾಮೆಂಟ್‌ಗಳು