ಹನುಮಾ ನಿನ್ನನು ನೆನೆಸಿದೆನು - Hanuma ninnanu nenesidenu lyrics in kannada

Hanuma Bhajan -- Hanuma ninnanu nenesidenu lyrics in kannada, belaguru bhajan lyrics, kannada bhajan lyrics
belaguru bhajan lyrics, kannada bhajan lyrics, hanuma ninnanu nenesidenu bhajan lyrics

|| ಹನುಮ ಸ್ತುತಿ ||

ಶ್ರೀ ಅವಧೂತ ಸದ್ಗುರು ಬಿಂದುಮಾಧವ ವಿರಚಿತ

ರಾಗ :- ರೇವತಿ

ತಾಳ :- ಆದಿ


|| ಹನುಮಾ ನಿನ್ನನು ನೆನೆಸಿದೆನು | ಹನುಮಾ ನಿನ್ನನು ಸ್ಮರಿಸಿದೆನು ||
ಹನುಮಾ ನೀನೇ | ಮನದೊಳ್ ನೆಲೆಸಿ |
ಭಕ್ತಿಯ ಪರವಶ ನೀಡಯ್ಯಾ || ಹನುಮಯ್ಯಾ ||

1. || ತನುವು ಮನವು | ನಿನ್ನ ದಯೆ | ಆ ತನುವಿಗೆ | ಜ್ಞಾನವ ನೀಡಯ್ಯಾ ||
       ಕವಿದ ಕತ್ತಲೆಯ ನೀಗಯ್ಯಾ | ನಿನ್ನ | ಜ್ಯೋತಿಯ ಬೆಳಕನು | ಬೆಳಗಯ್ಯಾ 
      || ಹನುಮಯ್ಯಾ ||

2. || ತಾಮಸ ಗುಣವ | ದೂಡಯ್ಯಾ | ಆ | ಸಾತ್ವಿಕ ಗುಣವ ನೀಡಯ್ಯಾ ||
ಕವಿದ ಕತ್ತಲೆಯ ನೀಗಯ್ಯಾ | ನಿನ್ನ | ಜ್ಯೋತಿಯ ಬೆಳಕನು | ಬೆಳಗಯ್ಯಾ ||
|| ಹನುಮಯ್ಯಾ ||

3. ನಿನ್ನಯ ಸೇವೆಯ ನೀಡಯ್ಯಾ | ಆ ಸೇವೆಯು ನನ್ನೊಳು ಇರಿಸಯ್ಯಾ ||
ಆಪದ್ಬಾಂಧವ ನೀನಯ್ಯಾ | ಎಮ್ಮನು ನೀನು ಸಲಹಯ್ಯಾ ||
|| ಹನುಮಯ್ಯಾ ||

4. ಕರ್ಮದ ಪಾಶವ | ಬಿಡಿಸಯ್ಯಾ | ಆ |
ಧರ್ಮದ ನುಡಿಯಾ ತಿಳಿಸಯ್ಯಾ || ನಾನೇ ಎಂಬುದ ಮರೆಸಯ್ಯಾ |
ನೀನೇ ಎಂಬುದ ಸಾರಯ್ಯಾ ||
|| ಹನುಮಯ್ಯಾ ||

5. ಭಕ್ತರ ಬಾಂಧವ ನೀನಯ್ಯಾ | ಬೆಲಗೂರು ಹನುಮನು | ಕಾಣಯ್ಯಾ ||
ಆಪದ್ಬಾಂಧವ ಹನುಮಯ್ಯಾ | ನಿನ್ನ | ಕೃಪೆಯೊಂದಿರಲು ಸಾಕಯ್ಯಾ || ಹನುಮಯ್ಯಾ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು