Hanuma bhajan -- Pavamaana jagada praana song lyrics in kannada

Hanuma bhajan -- Pavamaana jagada praana song lyrics in kannada, belaguru bhajan lyrics, kannada bhajan lyrics
belaguru bhajan lyrics,kannada bhajan lyrics, pavamaana jagada prana song lyrics

।। ಹನುಮ ಸ್ತುತಿ ।।

ರಾಗ :- ಉದಯರವಿಚಂದ್ರಿಕಾ 
ತಾಳ :- ಆದಿ 

।। ಪವಮಾನ ಪವಮಾನ । ಪವಮಾನ । ಜಗದಾ ಪ್ರಾಣ ।।
     ಸಂಕರುಷಣಾ । ಭವ ಭಯಾರಣ್ಯ । ದಹನಾ । ಪವನಾ  ।।
     ಶ್ರವಣವೆ  ಮೊದಲಾದ । ನವವಿಧ ಭಕುತಿಯ ।।
     ತವಕದಿಂದಲಿ ಕೊಡು । ಕವಿಜನ  ಪ್ರಿಯ ।। ಪವಮಾನ ।।

೧.  ।। ಹೇಮ ಕಚ್ಚುಟ ಉಪವೀತ|ಧರಿಪ ಮಾರುತ।
           ಕಾಮಾದಿ ವರ್ಗ ರಹಿತ ।।
           ವ್ಯೂಮಾದಿ ಸರ್ವ ವ್ಯಾಪಕ  । ಸತತ ನಿರ್ಭೀತಾ ।।
           ರಾಮಚಂದ್ರನ ನಿಜ ದೂತಾ ।।
           ಯಾಮ ಯಾಮಕೆ ನಿನ್ನಾ ರಾದಿಪುದಕೆ ।
           ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ।।
          ಈ ಮನಸಿಗೆ ಸುಖ ಸ್ತೋಮನ ತೋರುವ ।
          ಪಾಮರ ಮತಿಯನು ನೀ ಮಾಣಿಪುದು ।।     ಪವಮಾನ   ।।

೨.   ।। ವಜ್ರ ಶರೀರ । ಗಂಭೀರ । ಮುಕುಟಧರ । ದುರ್ಜನವಾನ ಕುಠಾರ ।।
           ನಿರ್ಜರ ಮಣಿ ದಯಪಾರ । ವಾರವುದಾರ । ಸಜ್ಜನ ರಾಘ ಪರಿಹಾರ ।।
           ಅರ್ಜುನ ಗೊಲಿದಂದು ಧ್ವಜವಾನಿಸಿ ನಿಂದು ।
           ಮೂರ್ಜಗ ವರಿವಂತೆ ಗರ್ಜನೆ ಮಾಡಿದೆ ।।
           ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದವ ಧೂಳಿ ।
           ಮಾರ್ಜನದೊಳು ಭವ ವರ್ಜಿತನೆನಿಸೋ ।।   ಪವಮಾನ    ।।

೩.    ।। ಪ್ರಾಣ, ಅಪಾನ , ವ್ಯಾನ । ಉದಾನ , ಸಮಾನ ।
             ಆನಂದ ಭಾರತಿ ರಮಣ  ।।
             ನೀನೆ ಶರ್ಮದಿ ಗೀರ್ವಾಣ  । ಆಧ್ಯಮರಿಗೆ  ।
             ಪ್ರಾಣಧನ ಪಾಲಿಸುವ ವರೇಣ್ಯ ।।
             ನಾನು ನಿರುತದಲಿ ಏನೇನೆಸಗಿದೆ  ।
             ಮಾನಸಾದಿ ಕರ್ಮ  । ನಿನಗೊಪ್ಪಿಸಿದೆ ।।
             ಪ್ರಾಣನಾಥ । ಶ್ರೀ । ವಿಜಯ ವಿಠಲನ । ಕಾಣಿಸಿ ಕೊಡುವುದು ।
             ಭಾನು ಪ್ರಕಾಶ ।।     ಪವಮಾನ     ।।
              
   
             


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು