belaguru bhajan lyrics, kannada bhajan lyrics, ishtu dina ee vaikuntha lyrics in kannada |
ರಾಗ :- ಹಿಂದೋಳ
ತಾಳ :- ಆದಿ
।। ಇಷ್ಟು ದಿನ ಈ ವೈಕುಂಠ ।
ಎಷ್ಟು ದೂರವೋ ಎನ್ನುತಲಿದ್ದೆ ।।
ದೃಷ್ಟಿಯಿಂದಲೆ ನಾನು ಕಂಡೆ ।
ಸೃಷ್ಟಿ ಈಶನೆ । ಶ್ರೀರಂಗ ಶಾಯಿ।।
ಇಷ್ಟು ದಿನ ।।
೧. ।।ಎಂಟು ಏಳನು । ಕಳೆಯದರಿಂದೆ ।
ಭಂಟರೈವರ ತುಳಿದುದರಿಂದೆ ।।
ತುಂಟನೊಬ್ಬನ । ತರಿದುದರಿಂದೆ ।
ತುಂಟನಾಂತಕ ಶ್ರೀರಂಗ ಶಾಯಿ ।।
ಇಷ್ಟು ದಿನ ।।
೨. ।। ವಜ್ರ ವೈಢೂರ್ಯ ।ತೊಲೆಗಳ ಕಂಡೆ ।
ಪ್ರಜ್ವಲಿಪಮಹ | ದ್ವಾರವ ಕಂಡೆ ।।
ನಿರ್ಜರಾದಿ ಮುನಿಗಳ ಕಂಡೆ ।
ದುರ್ಜನಾಂತಕ ಶ್ರೀರಂಗ ಶಾಯಿ ।।
ಇಷ್ಟು ದಿನ ।।
೩. ।। ರಂಭೆ ಊರ್ವಶಿ । ಮೇಳವ ಕಂಡೆ ।
ತುಂಬುರು ನಾರದ | ಮುನಿಗಳ ಕಂಡೆ ।
ಅಂಬುಜೋದ್ಭವ ರುದ್ರರ ಕಂಡೆ ।
ಶಂಬುರಾರಿ ಪಿತ |ಶ್ರೀರಂಗ ಶಾಯಿ
।। ಇಷ್ಟು ದಿನ ।।
೪. ।। ನಾಗಶಯನ ಮೂರ್ತಿಯ ಕಂಡೆ ।।
ಯೋಗಿ ಭೂಷಣ ಶಿವನನು ಕಂಡೆ ।।
ಭಾಗವತರ ಸಮ್ಮೇಳನ ಕಂಡೆ ।।
ಕಾಗಿ ನೆಲೆಯಾದಿ ।ಕೇಶವನಾ ಕಂಡೆ
।। ಇಷ್ಟು ದಿನ ।।
0 ಕಾಮೆಂಟ್‌ಗಳು