belaguru bhajan lyrics- kannada bhajan lyrics- bettavilidu bega baro song lyrics |
|| ಹನುಮ ಸ್ತುತಿ ||
ರಾಗ :-ಕಲ್ಯಾಣಿ
ತಾಳ :- ಛಾಪು
ರಾಗ :-ಕಲ್ಯಾಣಿ
ತಾಳ :- ಛಾಪು
ಬೆಟ್ಟವಿಳಿದು ಬೇಗ ಬಾರೋ|
ಜಗಜ್ಜಟ್ಟಿ ಹನುಮ ನಿನ್ನ ಚರಣವ ತೋರೋ ||
ಕರುಣಾವ ಬೀರೋ |
ಬೆಟ್ಟವಿಳಿದು ಬೇಗ ಬಾರೋ || ಪ ||
ರಣರಂಗದೊಳಗೆ ರಾವಣನ ಗುದ್ದಿದ ಧೀರ ||
ಭರದಿ ಲಕ್ಷ್ಮಣಗೆ ಪ್ರಾಣವನಿತ್ತ ಧೀರ ||
ವಾಯುಕುಮಾರ | ವಜ್ರ ಶರೀರ ||
ಬೆಟ್ಟವಿಳಿದು ಬೇಗ ಬಾರೋ ||
ಬಂಡಿ ಅನ್ನವನುಂಡು | ಭಂಡ ಬಕನ ಕೊಂದೆ ||
ತಂದೆ ಶ್ರೀರಾಮರ ದಾಸ | ಬೆಟ್ಟವಿಳಿದು ಬಾರೋ ||
ಬೆಟ್ಟವಿಳಿದು ಬೇಗ ಬಾರೋ ||
ದುಷ್ಟ ದಶಕಂಠನ | ಪಟ್ಟದೊಳ್ ರಾಮನ |
ಇಷ್ಟ ಸತಿಗೆ ನೀ ಕೊಟ್ಟೆ ಉಂಗುರವ ||
ತಾಳಿದೆ ಮುದವ | ತೋರಿದೆ ನಿಜವ|
ಅರುಹಿದೆ ಹಿತವ ||
ಬೆಟ್ಟವಿಳಿದು ಬೇಗ ಬಾರೋ ||
ನರಸಿಂಹ ವಿಠಲ | ದೊರೆ ನಿನ್ನ ಕರೆದರೆ ||
ಘೋರ ರೂಪುಗಳ ತೋರುವರೇನೋ ||
ಸಲ್ಲದು ಬಾರೋ ಮನೆಗೆ | ನಿಲ್ಲದೆ ಬೆಟ್ಟದೊಳಗೆ ||
ಬೆಟ್ಟವಿಳಿದು ಬೇಗ ಬಾರೋ ||
0 ಕಾಮೆಂಟ್‌ಗಳು