ರಾಗ :- ಬೇಹಾಗ್
ತಾಳ :- ಆದಿ
ಭಂಗವೇಕೆ ಪಡುವೆ|ನೀ ನಿಸ್ಸಂಗಿಯಾಗು ಮನವೇರಂ
ರಂಗುಗೂಡಿ|ಬಹಿರಂಗವಾಗಿ|ತನು ಸಂಗದಿಂದ|
ನಿಜ ಲಿಂಗವ ಕಾಣದೆ||ಭಂಗವೇಕೆ ||ಪ||
ಬಂಧು ಬಳಗವೆಂದು|ಸಡಗರದಿಂದ ಬಳಲಿ ನೊಂದು
ಮುಂದೆ ತಿಳಿಯದೆ|ಹಿಂದೆ ಉಳಿಯದೆ |
ಎಂದಿನಂತಲೇ ಹೊಂದುತ ತನುಗಳ||ಭಂಗವೇಕೆ||೧.
ಆತ್ಮ ಭಾವವಳಿದು|ಇಲ್ಲದ ಜಾತಿಯಲ್ಲಿ ಉಳಿದು||
ಛಾತಿ ಪೋಗಿ|ಯಮ ಭೀತಿಗಾಗಿ|ಬಹುನಾಥನಾಗಿ|
ಕಡು ಪಾತಕಿಯಾಗುತ||ಭಂಗವೇಕೆ || ೨.
ಶಂಕೆಯಲ್ಲಿ ಪಳಗೀ|ಪಾಪದ ಪಂಕದಲ್ಲಿ ಮುಳುಗೀ।
ಸಂಕಟ ಅಟವಿಗೆ ಬೆಂಕಿಯಾದ|ಗುರುಶಂಕರಾರ್ಯನಿಗೆ
ಕಿಂಕರನಾಗದೆ |।ಭಂಗ|| ೩.
0 ಕಾಮೆಂಟ್‌ಗಳು