ದೇಹಾವೆ ನಾನೆಂಬ ಮೋಹಾವ ತೋರಿದೆ -- Dehave nanemba mohava thoride

Tatva pada -- Dehave nanemba mohava thoride,belaguru bhajan lyrics,kannada bhajan lyrics
belguru bhajan lyrics,belaguru swamiji,deahave nanemba mohava thoride lyrics,kannad bhajan lyrics


|| ತತ್ವ ಪದ ||

ರಾಗ :- ಗೌಳ
ತಾಳ :- ಛಾಪು


ದೇಹವೇ ನಾನೆಂಬ ಮೋಹವ ತೋರಿದೆ!
ಆಹಾ ಮಾಯೆಯೇ।
ಊಹಿಸಲೀ ನಿನ್ನ ಸಾಹಸಗಳವಲ್ಲ।
ಆಹಾ ಮಾಯೆಯೆ॥ ೧


ಹಂಸನೊಳಿಲ್ಲದ ಸಂಸಾರ ಕೂಡಿದೆ|
ಆಹಾ ಮಾಯೆ।
ಸಂಶಯ ಕಟ್ಟಿ ವಿಧ್ವಂಸನ ಮಾಡಿದೆ
ಆಹಾ ಮಾಯೆ||೧|| 



ಮರಶಿಲೆಗಳನ್ನೆಲ್ಲ|ಸುರವರರೆನಿಸಿದೆ|
ಆಹಾ ಮಾಯೆ
ಪರಿಪೂರ್ಣನೊಳು ಸೇರಿ|ಪರಿಪರಿ ಬಗೆಯಾದೆ॥
ಆಹಾ ಮಾಯೆ ||೨||


ಜಾತಿ ಎಂಬುವದೊಂದು। ಮಾತಿನೊಳ್‌ ನಿಲಿಸಿದೆ|
ಆಹಾ ಮಾಯೆ ।
ರೀತಿಯ ಕೆಡಿಸಿ ಭವಭೀತಿಯ ತೋರಿದೆ
ಆಹಾ ಮಾಯೆ ||೩||


ಹಿಂದುಮುಂದಿಲ್ಲದೆ। ಸಂದೀನೊಳ್‌ ತೋರುವೆ।
ಆಹಾ ಮಾಯೆ ||
ಹಿಂದು ಮುಂದಿದ್ದವ। ಬಂದರೆ ಹಾರುವೆ।
ಆಹಾ ಮಾಯೆ ||೫||

ಪರಮನೊಳಿಲ್ಲದ ಮರೆಯನೆ ಮಾಡಿದೆ!
ಆಹಾ ಮಾಯೆ ।
ಶರೀರ ತೊಡಿಸಿ ಜನ್ನಸೆರೆಯೊಳು ಕೂಡಿದೆ
ಆಹಾ ಮಾಯೆ ||೬||

ಅರಿಯುವೆನೆಂದು। ನಿನ್ನರಸಲು ಪುಸಿಯಪ್ಪೆ
ಆಹಾ ಮಾಯೆ ।
ಬರಿ ಭ್ರಮೆಯಿಂದ ಶ್ರೀಗುರುಶಂಕರನೊಳಿರ್ಪೆ|
ಆಹಾ ಮಾಯೆ ||೭||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು