belaguru bhajan lyrics, kannada bhajan lyrics, more hokke sadguru raaya song lyrics |
|| ಗುರು ಭಜನೆ ||
ರಾಗ :- ಮಧ್ಯಮಾವತಿ
ತಾಳ :- ಆದಿ
|| ಮೊರೆ ಹೊಕ್ಕೆ ಸದ್ಗುರು ರಾಯ ||
ದೂರ ಮಾಡು ಮೋಹಮಾಯ || ಮೊರೆ ಹೊಕ್ಕೆ ||
1. || ಕಾಮ ಕ್ರೋಧಾದಿಗಳ ಪೀಡಾ |
ಇನ್ನು ಆಗಗೊಡಬ್ಯಾಡ || ಮೊರೆ ಹೊಕ್ಕೆ ||
2. || ನಿನ್ನ ಪೊದರಿಗೆ ಬಂದು ಬಿದ್ದೆ |
ಇನ್ನು ಮೇಲೆ ನಾನು ಗೆದ್ದೆ || ಮೊರೆ ಹೊಕ್ಕೆ ||
3. || ಕಷ್ಟ ಬೇಕಾದಷ್ಟು ಬರಲಿ |
ನಿನ್ನ ಕೃಪೆ ಮಾತ್ರ ಇರಲಿ || ಮೊರೆ ಹೊಕ್ಕೆ ||
4. || ಎನ್ನಲಿ ಉಂಟು ಭೋಳೆ ಭಾವ |
ಹೇಳಿ ಮಾಡಿಸಿಕೊಳ್ಳೋ ಸೇವಾ || ಮೊರೆ ಹೊಕ್ಕೆ ||
5. || ಏನೂ ಇಡಬೇಡ ಗೂಢಾ |
ಮಹಾ ಭಾಗವತ ಮಾಡಾ || ಮೊರೆ ಹೊಕ್ಕೆ ||
0 ಕಾಮೆಂಟ್‌ಗಳು