Sadguru Bhajan -Vandipe nimage gurunatha song lyrics in kannada

Sadguru Bhajan -- Vandipe nimage gurunatha song lyrics in kannada, belaguru bhajan lyrics, kannada bhajan lyrics
belaguru bhajan lyrics, kannada bhajan lyrics, vandipe nimage gurunatha song lyrics
be


|| ಗುರು ಸ್ತುತಿ ||

ರಾಗ :- ಹರಿಕಾಂಬೋಧಿ
ತಾಳ :- ಆದಿ


|| ವಂದಿಪೆ ನಿಮಗೆ ಗುರುನಾಥ | ಮೊದಲೊಂದಿಪೆ

ನಿಮಗೆ ಗುರುನಾಥಾ ||

ಹಿಂದು ಮುಂದರಿಯಾದ ನಿಮ್ಮ ಕಂದನಾದ ಎನ್ನ | ಭವ |

ಬಂಧನವ ಬಿಡಿಸೊ ಗುರುನಾಥ ||

ಮೊದಲೊಂದಿಪೆ ನಿಮಗೆ ಗುರುನಾಥ || ಪ ||



|| ಭೇದವಾದ ವಾದಿಗಳ|ಹಾದಿಯನ್ನ ಬಿಡಿಸೋ ಮುನ್ನ |

ಪಾದವ ಪಾಲಿಸೊ ಗುರುನಾಥ | ನಿಮ್ಮ ಪಾದವ

ಪಾಲಿಸೊ ಗುರುನಾಥ ||

ಮೊದಲೊಂದಿಪೆ ನಿಮಗೆ ಗುರುನಾಥ || ೧.




|| ಈಶ ನಿಮ್ಮ ದಾಸನಿಗೆ | ದಾಸನಾದ ಎನ್ನ ಭವ |

ಪಾಶವನ್ನು ಹರಿಸೋ ಗುರುನಾಥ ||

ಭವ ಪಾಶವನ್ನು ಹರಿಸೋ ಗುರುನಾಥ |

ಮೊದಲೊಂದಿಪೆ ನಿಮಗೆ ಗುರುನಾಥ || ೨.



||ಅಲ್ಲಿ ಇಲ್ಲಿ ಇರುವ ದೇವರೆಲ್ಲಾ ಬಂದು ನಿಮ್ಮ ಪಾದ |

ದಲ್ಲೆ ನಿಂತರಲ್ಲೋ ಗುರುನಾಥ ||

ಪಾದದಲ್ಲೇ ನಿಂತರಲ್ಲೋ ಗುರುನಾಥ ||

ಮೊದಲೊಂದಿಪೆ ನಿಮಗೆ ಗುರುನಾಥ || ೩.



॥ ಲೀಲೆಯಿಂದ ನಿಮ್ಮಪಾದ ಧೂಳಿಯೆನ್ನ ಶಿರದ ಮೇಲೆ

। ಬೀಳುವಂತೆ ಮಾಡೋ ಗುರುನಾಥ 

ಮೇಲೆ ಬೀಳುವಂತೆ ಮಾಡೋ ಗುರುನಾಥ

ಮೊದಲೊಂದಿಪೆ ನಿಮಗೆ ಗುರುನಾಥ ॥ ೪.



॥ ಗುರುವೇ ನಿಮ್ಮ ಚರಣದಲ್ಲಿ ಕರುಣೆ ಇಟ್ಟೆವಯ್ಯಾ

ಮುಂದೆ ॥ ಮರಣವನ್ನು ಹರಿಸೋ ಗುರುನಾಥ ॥ 

ಮರಣವನ್ನು ಹರಿಸೋ ಗುರುನಾಥ ॥ 

ಮೊದಲೊಂದಿಪೆ ನಿಮಗೆ ಗುರುನಾಥ ॥ ೫.



||ತಂದೆ ತಾಯಿ ದೈವ ನೀನೆ ಎಲ್ಲಾ ಬಂದು ನಿನ್ನ ಪಾದ ।

ಅಲ್ಲೇ ನಿಂತರಲ್ಲೋ ಗುರುನಾಥ ॥ 

ಪಾದದಲ್ಲೇ ನಿಂತರಲ್ಲೋ ಗುರುನಾಥ ॥ 

ಮೊದಲೊಂದಿಪೆ ನಿಮಗೆ ಗುರುನಾಥ ॥ ೬.



॥ ಗುರುವೇ ನಿಮ್ಮ ಚರಣದಲ್ಲಿ । ಶಿರವನಿಟ್ಟ ನರನೂ

ಕೂಡ ॥ ಹರನ ಮೀರುವನೋ ಗುರುನಾಥ ॥

ಮೊದಲೊಂದಿಪೆ ನಿಮಗೆ ಗುರುನಾಥ ॥ ೭.



॥ ಮಂಕನಾದರೇನು । ನಿಮ್ಮ ಕಿಂಕರನಾದೊಡೆಗುರು ।

ಶಂಕರನ ಮೀರುವ ಗುರುನಾಥ

ಗುರುಶಂಕರನಾಗುವ ಗುರುನಾಥ ॥ 

ಮೊದಲೊಂದಿಪೆ ನಿಮಗೆ ಗುರುನಾಥ ॥ ೮.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು