belaguru bhajan lyrics, kannada bhajan lyrics, saari chellide mukthi song lyrics in kannada |
|| ತತ್ವಪದ ||
ರಾಗ :- ಶಂಕರಾಭರಣ
ತಾಳ :- ಆದಿ
|| ಸಾರಿ ಚೆಲ್ಲಿದೆ ಮುಕ್ತಿ | ಎಲ್ಲಿ ನೋಡಿದರಲ್ಲಿ | ಸಾರಿ ಚೆಲ್ಲಿದೆ ಮುಕ್ತಿ || ಪ ||
1. || ವೇದದ ಮೊದಲಿನ ಮೂಲವಿದು |
ಹಾದಿ ಹಾದಿಗೆ ಬಿದ್ದಿಹುದು ||
ಇದು ಸಾಧಕ ಜನರಿಗೆ | ಕಾಣಿಪುದಣ್ಣಾ || ಸಾರಿ ಚೆಲ್ಲಿದೆ ಮುಕ್ತಿ ||
2. || ಎತ್ತ ನೋಡೆ ಪರಬ್ರಹ್ಮಿಹುದು |
ಸುತ್ತ ಮುತ್ತಲೂ ಸುಳಿದಿಹುದು |
ಗುರು ಪುತ್ರರಿಗಲ್ಲದೆ ಕಾಣಿಸದಣ್ಣಾ || ಸಾರಿ ಚೆಲ್ಲಿದೆ ಮುಕ್ತಿ ||
3. || ಹಿಂದೆ ನೋಡಲು ಬರುತಿಹುದು |
ಮುಂದೆ ನೋಡಲು ನಿಂತಿಹುದು |
ಸಂದು ಸಂದಿಗೆ ಜಡಿದಿಹುದು | ಆನಂದ ಗುಹೇಶ್ವರ ಲಿಂಗವದಣ್ಣಾ ||
|| ಸಾರಿ ಚೆಲ್ಲಿದೆ ಮುಕ್ತಿ ||
0 ಕಾಮೆಂಟ್‌ಗಳು