|| ಗಣೇಶ ಸ್ತುತಿ ||
ಶಕ್ತಿ ಸಹಿತ ಗಣಪ ನೀನು |
ಈಶ ಸೂನು ದೀನನಾಗಿ ಬೇಡುವೆ
ಬೇಡುವೆ ಪಾಡುವೆ ನಂಬುವೆ ಸ್ಮರಿಸುವೆ ||
ಏಕದಂತ ಗೌರಿಪುತ್ರ,
ಈಶಮಿತ್ರ ಭಕುತ ಪಾತ್ರ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ || 1
ವರಗಜಾಶ್ರೀ ವಿಮಲಚರಿತ
ಉದರಭರಿತ ಪಾಶಧರಿತ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ || 2
ಭಕುತರಾಗ ವಿನುತ ಚರಣ
ವಿಘ್ನಹರಣ ನಾಗಾಭರಣ ಗಣಪನೆ |
ಗಣಪನೆ ಸುರವರ ಭಕುತರ ಪೊರೆಯುತ || 3
ಭಕುತಿಯಿಂದ ಭಜಿಪೆನಯ್ಯ
ಮನ್ನಿಸಯ್ಯ ಕರುಣಿಸಯ್ಯ ಗಣಪನೆ
ಗಣಪನೆ ಸುರವರ ಭಕುತರ ಪೊರೆಯುತ || 4
0 ಕಾಮೆಂಟ್ಗಳು