ಬಿಂದು ನೋಡ ಬಾರೋ - Belaguru Bhajan - Bindu Noda Baro



|| ಬಿಂದುಮಾಧವ ಸ್ತುತಿ ||


ಬಿಂದು ನೋಡ ಬಾರೊ -

ಗುರುಗಳನಿಂದು ನೋಡ ಬಾರೋ,

ಪಾದುಕೆ ಇಲ್ಲದೆ ಬುವಿಯನು ಸುತ್ತುವ

ನಡೆದಾಡುವ - ಶ್ರೀ ಮಾರುತಿರಾಯನ-

ಇಂದು ನೋಡಬಾರೋ

ಬಿಂದು ನೋಡ ಬಾರೊ -

ಇಂದು ನೋಡಬಾರೋ

ಬಿಂದು ನೋಡ ಬಾರೊ -


ಬಿಂದು ನೋಡ ಬಾರೊ -

ಗುರುಗಳನಿಂದು ನೋಡ ಬಾರೋ, || ಪಲ್ಲವಿ ||


ಜಡೆಗಟ್ಟಿದ ಶಿರ - ಋಷಿಗಳ ತೆರದಲಿ,

ಚಂದನ ತಿಲಕ - ಕುಂಕುಮ ನಡುವಲ್ಲಿ

ಭಸ್ಮ ಭಸಿತ ಹಣೆಯss 

ಬಿಂದು ನೋಡ ಬಾರೊ -

ಭಸ್ಮ ಭಸಿತ ಹಣೆಯss -

ಬಿಂದು ನೋಡ ಬಾರೊ -


ಬಿಂದು ನೋಡ ಬಾರೊ -

ಗುರುಗಳನಿಂದು ನೋಡ ಬಾರೋ, || 1 ||


ಮಾಸದ ನಗುಮುಖ - ಗಳ ರುದ್ರಾಕ್ಷss

ದತ್ತನ ಹೆಸರಲಿ - ಜೋಳಿಗೆ ಭಿಕ್ಷ

ಶ್ವೇತಾಂಬರಧಾರೀ ..

ಬಿಂದು ನೋಡ ಬಾರೊ -

ಶ್ವೇತಾಂಬರಧಾರೀ ..

ಬಿಂದು ನೋಡ ಬಾರೊ -


ಬಿಂದು ನೋಡ ಬಾರೊ -

ಗುರುಗಳನಿಂದು ನೋಡ ಬಾರೋ, || 2 ||


ಪುರಿಬೆಲಗೂರಲಿ - ಹನುಮನ ಮೂರುತಿ

ಭಕುತರ ಸಲಹುವ - ನಿಜ ಬೈರಾಗಿ

ಸಕಲಹಿತದ ಸರಳೀ..

ಬಿಂದು ನೋಡ ಬಾರೊ -

ಸಕಲಹಿತದ ಸರಳೀ..

ಬಿಂದು ನೋಡ ಬಾರೊ -


ಬಿಂದು ನೋಡಬಾರೋ

ಗುರುಗಳನಿಂದು ನೋಡ ಬಾರೋ, || 3 ||


ಹುಸಿಯೇ ಇಲ್ಲದ - ಸಂಕಲ್ಪದ ಶ್ರೀ

ಮಾಧವ ರೂಪದ ಬಿಂದು ತಪಸ್ವಿ

ವೀರಪ್ರತಾಪನಲಾ..

ಬಿಂದು ನೋಡ ಬಾರೊ -

ವೀರಪ್ರತಾಪನಲಾ.. 

ಬಿಂದು ನೋಡ ಬಾರೊ -


ಬಿಂದು ನೋಡಬಾರೋ

ಗುರುಗಳನಿಂದು ನೋಡ ಬಾರೋ, ||3||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು