|| ಬಿಂದುಮಾಧವ ಸ್ತುತಿ ||
ಬಿಂದುವ ಕಂಡೀರಾ ಮಾಧವ ಬಿಂದುವ ಕಂಡೀರಾ
ಬಿಂದುವ ಕಂಡೀರಾ ಕರುಣಾ ಸಿಂಧುವ ಕಂಡೀರಾ ||ಪಲ್ಲವಿ ||
ಅಗಣಿತ ಗುಣಗಳ ಮಹಿಮನೆ ಬಿಂದು
ಆದರ್ಶ ತೋರಿ ನಡೆಯುವ ಬಿಂದು
ಇಳೆಯಲಿ ಮೂಡಿದ ಮಾಣಿಕ್ಯ ಬಿಂದು
ಈಶಗು ಸುತನೇ ಮಾರುತಿ ಬಿಂದು
ಬಿಂದುವ ಕಂಡೀರಾ ಮಾಧವ ಬಿಂದುವ ಕಂಡೀರಾ || 1 ||
ಉದಯ ಕಾಲದ ರವಿಯೇ ಬಿಂದು
ಊರಿಗೆ ಊರೇ ಬೆಳಗುವ ಬಿಂದು
ಋಷಿ ಮುನಿ ಜನಕೆ ಸರಿಸಮ ಬಿಂದು
ಎರಡಿಲ್ವೋ ಒಂದೇ ಅನ್ನುವ ಬಿಂದು
ಬಿಂದುವ ಕಂಡೀರಾ ಮಾಧವ ಬಿಂದುವ ಕಂಡೀರಾ || 2 ||
ಏಳು ಬೀಳುಗಳ ಸಮ ಚಿತ್ತ ಬಿಂದು
ಐಕ್ಯತೆ ಮೂಡಿಪ ಮಂತ್ರವೇ ಬಿಂದು
ಒಮ್ಮೆಯು ಸ್ವಾರ್ಥಕೆ ಕೇಳದ ಬಿಂದು
ಓದದೆ ಸಕಲವ ಬಲ್ಲವ ಬಿಂದು
ಬಿಂದುವ ಕಂಡೀರಾ ಮಾಧವ ಬಿಂದುವ ಕಂಡೀರಾ || 3 ||
ಔದಾರ್ಯಕನ್ವರ್ಥ ನಾಮವೆ ಬಿಂದು
ಅಂತರಾತ್ಮದ ಒಡೆಯನೆ ಬಿಂದು
ಆಹಾ ಅದ್ಭುತ ಚರಿತನೇ ಬಿಂದು
ಸ್ವರಗಳ ಜೊತೆಯ ಲಯವೇ ಬಿಂದು
ಬಿಂದುವ ಕಂಡೀರಾ ಮಾಧವ ಬಿಂದುವ ಕಂಡೀರಾ
ಕರುಣಾ ಸಿಂಧುವ ಕಂಡೀರಾ
ನಮ್ಮ ಗುರುಗಳ ಕಂಡೀರಾ || 4 ||
ಜೈ ಜೈ ಗುರುದೇವ ದತ್ತ 🙏🙏🙏
0 ಕಾಮೆಂಟ್‌ಗಳು