ಜಯ ಬಿಂದು ಜಯ ಬಿಂದು - Bindumadhava Stuti - Belaguru Bhajan - Jaya Bindu Jaya Bindu

ಬಿಂದುಮಾಧವ ಸ್ತುತಿ

kannadabhajanlyrics.com


ಜಯಬಿಂದು ಜಯಬಿಂದು ಜಯ ಪಾವನ ಬಿಂದು|

ಜಯಜಯ ಕರುಣಾ ಸಿಂಧೂ ಜಯ ಭಕುತರಬಂಧು ||

-------- - - - ಜಯಬಿಂದು ಜಯಬಿಂದು


ಮಾರುತಿಯಾಗಿ ನರ ರೂಪವ ಧರಿಸಿ|

 ಗುರುವಾಗಿ ನಿಂತೇ ಬೆಲಗೂರಿನ ಬಂಧು |

ಸಂಕಲ್ಪದಿ ಭಾರತಿ ಭವನ ನಿರ್ಮಿಸಿ |

 ಭಾರತಿ ತೀರ್ಥರ ಪದದಲ್ಲಿ ನಿಂದು 

-------- - - - ಜಯಬಿಂದು ಜಯಬಿಂದು |


ಮಧ್ವ ರೂಪವ ಧರಿಸಿ ದ್ವೈತ ನಾನೆಂದೆ |

 ಎರಡಿಲ್ಲವೋ  ಒಂದೇ ಶಂಕರರು ತಂದೆ |

ವಿಶಿಷ್ಟ ಕೆಲಸಕ್ಕೆ  ಅದ್ವೈತ ತಂದೆ |

ರಾಮನ ಅನುಜನೆ ನೀನಾಗಿ ಬಂದೆ |

---------- ಜಯಬಿಂದು ಜಯಬಿಂದು


 ಕಾಶಿ ಹೃಷಿಕೇಶದಿ ಗಂಗೆಯಲಿ ಮಿಂದು |

ರುದ್ರನ ಭೋರ್ಗರೆತವ ಕರುಣಿಸಿದೆ ಅಂದು |

ಪುನರ್ಜನ್ಮದ ಗುಟ್ಟು ಆಯಿತು ರಟ್ಟು |

ಬಿಡಿಸಿ ಹೇಳಿದೆ ಅಂದು ಮೋಕ್ಷ ಹೇಗೆಂದು |

----------------- ಜಯಬಿಂದು ಜಯಬಿಂದು


ಹನುಮಾನಾಗಿ  ಜೊತೆಗೆ ನೀನೆಂದೂ ಇರುವೆ |

ನಿನ್ನ ಒಡನಾಟಕ್ಕೆ ದಾಸ ನಾ ಬರುವೆ |

ದರುಶನ ಮಾತ್ರದಿ ಮುಕುತನು ಭವದಲ್ಲಿ |

 ಗುರುಬಿಂದು ಮಮಬಿಂದು ರಕ್ಷಿಸು ಇಳೆಯಲ್ಲಿ |

- - - - - - - - - - - - ಜಯಬಿಂದು ಜಯಬಿಂದು 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು