|| ಹನುಮ ಸ್ತುತಿ ||
ರಾಗ : ಶಂಕರಾಭರಣ
ತಾಳ : ಆದಿ
|| ಪಾವನ ಗುಣ ರಾಮ | ಹರೇ | ರಾಮ | ಹರೇ ||
ಪರಮ ದಯಾ ನಿಲಯಾ | ಹರೇ ಪರಮ ದಯಾ ನಿಲಯಾ | ಹರೇ |
ಪಾವನ ಗುಣ ರಾಮ || || ಪಲ್ಲವಿ ||
1. || ಮಾಯಾ ಮಾನುಷ | ರೂಪ | ಮಾಯಾತೀತ | ಮಂಗಳದಾತ ||
ವೇದಾಂತವದೂ | ಹೃದಯ ವಿಹಾರ ವೇದಮಯಾ ಪರಮಾನಂದ ರೂಪ
|| ಪಾವನ ಗುಣರಾಮ ||
2. || ಕರುಣಾ | ರಸಭರ ನಯನಾ || ದರಹಾಸ ಮನೋಹರ ವದನಾ ||
ನವ ತುಳಸೀದಳ | ಮಾಲಾಭರಣ || ನಾನಾ ಜೀವನ |ನಾಟಕ ಕಾರಣ ||
|| ಪಾವನ ಗುಣರಾಮ ||
3. || ಶ್ರೀ ಗುರುವರ ಕರುಣಾ ಸೀಮ | ಎನಗರುಹಿತು | ರಾಮನ ನಾಮ ||
ಶ್ರೀ ಗುರುವರ ||
ರಾಮ ರಹೀಮ | ಕೃಷ್ಣ ಕರೀಮ | ನಾಮರೂಪ ಜಗವೆಲ್ಲವೂ ರಾಮ ||
ಶ್ರೀ ಗುರುವರ ||
4. || ತಂದೆ ತಾಯಿ ಬಂಧು ಬಳಗ | ಸಕಲ ಚರಾಚರ ಎಲ್ಲವು ರಾಮ ||
ಹಿಂದೆ ಮುಂದೆ ಎಂದೆಂದಿಗೂ ಎಲ್ಲಾ | ನಿಂದು ಸಲಹುವನು ರಾಮಾ
|| ಶ್ರೀ ಗುರುವರ ||
5. || ಭಜನಾ ಹರಿಸೇವಾ | ಸುಜನಾ | ಶ್ರೀರಾಮರ ನಿಜ ಗುಣಧಾಮ ||
ಭಜನಾ ಹರಿಸೇವಾ ||
ಸಾಧನಾ | ಸದಾ ರಾಮಧ್ಯಾನ | ಮುಕುತಿ ರೂಪ ಜನಾವದನಾ ||
|| ರಾಮ ಪಾಲಯ ಕೋದಂಡರಾಮ | ಪುಣ್ಯನಾಮ |
ಭೂಮಿಜಾಪತೆ | ಆನಂದಸೀಮ | ಗತಿಮತಿ ನೀನೇ ರಾಮಾ ||
ಭಜನಾ ಹರಿಸೇವಾ ||
6. || ಭಜಮನ ಭಜಿರೇ ಶ್ರೀರಾಮ |
ಭಜಮನ ಭಜಿರೇ ಸೀತಾರಾಮ || ಭಜಮನ ||
ಮೋಹನರಾಮ | ಮಂಗಳಧಾಮ || ಮಾಯಾತಿಮಿರ ವಿರಾಮ ||
ಆತ್ಮಾರಾಮ | ಆನಂದರಾಮ | ಅಗಣಿತ ಗುಣಗಳ ತಾರಕನಾಮ ||
|| ಜೈ ರಾಂ | ಸೀತಾರಾಂ || ಜೈ ರಾಂ | ಸೀತಾರಾಂ ||
0 ಕಾಮೆಂಟ್ಗಳು