| ತತ್ವಪದ ||
ರಾಗ:- ಕಲ್ಯಾಣಿ
ತಾಳ: ಆದಿ
ಎಂಥಾ ಮನುಷ್ಯ ಜನ್ಮ|ಏನ್ ಕೆಡ್ಸಿ ಬಿಟ್ಟೇರಪ್ಪ||
ಇಂಥಾ ಜನ್ಮವು ಸಿಕ್ಕುತ್ತೇನಪ್ಪಯ್ಯಾ ||
ಸಂತರ ಸಂಘವಿಲ್ಲ|ಕಂತುಹರನ ಧ್ಯಾನವಿಲ್ಲ
ಸಂಸಾರಕ್ಕೆ ಸಿಕ್ಕೇ|ಕೆಟ್ಟಿರಪ್ಪಯ್ಯಾ ||ಆಹಾ||
ಹರದಿಯ ಮೋಹಕ್ಕಾಗಿ ಹರನಾ ಧ್ಯಾನವಾ ಬಿಟ್ಟು |
ಬರಿದೇ ನಿದ್ರೆಯ ಮಾಡಿ|ಕೆಟ್ಟಿರಪ್ಪಯ್ಯಾ ||
ಉದಯವಾಗುವ ಮುನ್ನ|ಹರನಧ್ಯಾನವ ಮಾಡಿರಪ್ಪ
ಮುಕ್ತಿಯನ್ನು ಕೊಡುವನು ಕೇಳಿರಪ್ಪಯ್ಯಾ ||ಆಹಾ||
ಕಾಲು ಕೈ ಕಿವಿ ಮೂಗು|ನಾಲಿಗೆ ಇರುವಾಗ |
ಕಾಲಹರನ ಧ್ಯಾನವನ್ನು ಮಾಡಿರಪ್ಪಯ್ಯ |
ಕಾಲನ ಭಟರು ಬಂದು|ಕಾಲ್ಪಿಡಿದೆಳೆದಾಗ |
ತಾಳು ತಾಳೆಂದರೆ|ಕೇಳಿರಪ್ಪಯ್ಯಾ||ಆಹಾ||
ಈರೇಳೆಪ್ಪತ್ತು ಕೋಟಿ ಜೀವರಾಶಿಗಳ ತಿರುಗಿ |
ಮಾನವನ ದೇಹಕ್ಕೆ ಬಂದಿರಪ್ಪಯ್ಯಾ |
ಧರೆಯೊಳು ಮಣಿಪುರ | ವರಪಾರ್ವತೀಶನ |
ಕರುಣ ಕಟಾಕ್ಷದಿ | ಬಾಳಿರಪ್ಪಯ್ಯಾ || ಆಹಾ ||
0 ಕಾಮೆಂಟ್ಗಳು