|| ಹರಿ ಸ್ತುತಿ ||
ರಾಗ ಜಂಜೂಟಿ
ತಾಳ ಆದಿ |
ಪ. ಎನಗೂ ಆಣೆ ರಂಗ | ನಿನಗೂ ಆಣೆ ||
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ||ರಂಗ||
ನಿನ್ನನ್ನು ಬಿಟ್ಟು|ಅನ್ಯರ ಭಜಿಸಿದರೆನಗೆ ಆಣೆ ರಂಗ ||
ಎನ್ನ ನೀ ಕೈಬಿಟ್ಟು ಹೋದರೆ|ನಿನಗೂ ಆಣೆ ರಂಗ||1.
ತನುಮನ ಧನದಲಿ ವಂಚಕನಾದರೆ|ಎನಗೆ ಆಣೆ ರಂಗ|| ಮನಸು ನಿನ್ನಲಿ ನಿಲಿಸದಿದ್ದರೆ | ನಿನಗೆ ಆಣೆ ||ಎನಗೂ ಆಣೆ || 2.
|| ಶಿಷ್ಟರ ಸಂಗವ ಮಾಡದಿದ್ದರೆ | ಎನಗೆ ಆಣೆ ರಂಗ|| ದುಷ್ಟರ ಸಂಗವ ಬಿಡಿಸದಿದ್ದರೆ | ನಿನಗೆ ಆಣೆ || ಎನಗೂ ಆಣೆ ರಂಗ || 3.
ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ ||ಲೌಕಿಕವ ನೀ ಬಿಡಿಸದಿದ್ದರೆ | ನಿನಗೂ ಆಣೆ || ಎನಗೂ ಆಣೆ ರಂಗ || 4.
ಅನ್ನದಾನವ ಮಾಡದಿದ್ದರೆ|ಎನಗೂ ಆಣೆ ರಂಗ ಅದಕನುಕೂಲವ ಮಾಡದಿದ್ದರೆ | ನಿನಗೂ ಆಣೆ || ಎನಗೂ ಆಣೆ ರಂಗ || 5.
ಹರಿ ನಿನ್ನಾಶ್ರಯ ಮಾಡದಿದ್ದರೆ |ಎನಗೂ ಆಣೆ ರಂಗ ||ಪುರಂದರವಿಠಲ |ಒಲಿಯದಿದ್ದರೆ | ನಿನಗೂ ಆಣೆ ||ಏನಗೂ ಆಣೆ ರಂಗ || 6.
|| ಶ್ರೀರಾಮ್ ಜಯರಾಮ್ ಜಯ ಜಯ ರಾಮ್ ||
0 ಕಾಮೆಂಟ್‌ಗಳು