ಈಶ ನಿಮ್ಮ ಚರಣ ಭಜನೆ Belaguru Bhajan - Keshava Nama

|| ಕೇಶವ ನಾಮ || 




ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು

ದೋಶರಾಶಿ ನಾಶಮಾಡು ಶ್ರೀಶ ಕೇಶವ || 1 ||

ರಾಮರಾಮ ರಾಮ ರಾಮ ।

ರಾಮರಾಮ ರಾಮ ರಾಮ |

ರಾಮ ರಾಮ ಸೀತಾರಾಮ। ರಾಮ ರಾಘವ॥ 


ಶರಣು ಹೊಕ್ಕೆನಯ್ಯ ಎನ್ನ|ಮರಣ ಸಮಯದಲ್ಲಿ ನಿನ್ನ |

ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 2 ||


ಶೋಧಿಸೆನ್ನ ಭವದ ಕಲುಶ|ಭೋಧಿಸಯ್ಯ ಜ್ಞಾನವೆನಗೆ||

ಬಾಧಿಸುವ ಯಮನ ಬಾಧೆ|ಬಿಡಿಸು ಮಾಧವ || 3 ||


ಹಿಂದನೇಕ ಯೋನಿಗಳಲಿ|ಬಂದು ಬಂದು ನೊಂದೆನಯ್ಯ ||

ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ||4||


ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||

ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 5 ||


ಮದನನಯ್ಯ ನಿನ್ನ ಮಹಿಮೆ|ವದನದಲ್ಲಿ ನುಡಿಯುವಂತೆ||

ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 6 ||


ಕವಿದುಕೊಂಡು ಇರುವ ಪಾಪ|ಸವೆದು ಪೋಗುವಂತೆ ಮಾಡಿ||

ಜವನ ಬಾಧೆಯನ್ನು ಬಿಡಿಸೋ|ತ್ರಿವಿಕ್ರಮ ||7||


ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||

ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 8 ||


ಮೊದಲು ನಿನ್ನ ಪಾದಪೂಜೆ|ಒದಗುವಂತೆ ಮಾಡೋಎನ್ನ||

ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 9 ||


ಹುಸಿಯನಾಡಿ ಹೊಟ್ಟೆ ಹೊರೆವ|ವಿಷಯದಲ್ಲಿ ರಸಿಕನೆಂದು||

ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 10 ||


ಕಾಮಕ್ರೋಧ ಬಿಡಿಸಿ ನಿನ್ನ|ನಾಮ ಜಿಹ್ವೆಯೊಳಗೆ ನುಡಿಸು||

ಶ್ರೀಮಹಾನುಭಾವನಾದ ದಾಮೋದರ || 11 ||


ಬಿದ್ದು ಭವದನೇಕ ಜನುಮ|ಬದ್ದನಾಗಿ ಕಲುಷದಿಂದ ||

ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 12 ||


ಪಂಕಜಾಕ್ಷ ನೀನೆ ಎನ್ನ |ಮಂಕುಬುದ್ಧಿಯನ್ನು ಬಿಡಿಸಿ |

ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 13 ||


ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||

ಘಾಸಿ ಮಾಡದಿರು ಇನ್ನು ವಾಸುದೇವನೇ || 14 ||


ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||

ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 15 ||


ಜನನಿ ಜನಕ ನೀನೆಯೆಂದು|ನೆನೆವೆನಯ್ಯ ದೀನಬಂಧು ||

ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 16 ||


ಹರುಶದಿಂದ ನಿನ್ನ ನಾಮ|ಸ್ಮರಿಸುವಂತೆ ಮಾಡು ಕ್ಷೇಮ ||

ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 17 ||


ಸಾಧುಸಂಗ ಕೊಟ್ಟು ನಿನ್ನ|ಪಾದಭಜನೆ ಇತ್ತು ಎನ್ನ ||

ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 18 ||


ಚಾರುಚರಣ ತೋರಿ ಎನಗೆ|ಪಾರುಗಾಣಿಸಯ್ಯ ಕೊನೆಗೆ ||

ಭಾರ ಹಾಕಿರುವೆ ನಿನಗೆ ನಾರಸಿಂಹನೇ || 19 ||


ಸಂಚಿತಾದಿ ಪಾಪಗಳು|ಕಿಂಚಿತಾದ ಪೀಡೆಗಳನು ||

ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 20 ||


ಜ್ಞಾನ ಭಕುತಿ ಕೊಟ್ಟು ನಿನ್ನ|ಧ್ಯಾನದಲ್ಲಿ ಇಟ್ಟು ಸದಾ ||

ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 21 ||


ಜಪತಪಾನುಷ್ಠಾನವಿಲ್ಲ|ಕುಪಿತಗಾಮಿಯಾದ ಎನ್ನ ||

ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 22 ||


ಮೊರೆಯ ಇಡುವೆನಯ್ಯ ನಿನಗೆ|ಶರಧಿಶಯನ ಶುಭಮತಿಯ||

ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 23 ||


ಪುಟ್ಟಿಸಲೇಬೇಡ ಇನ್ನು|ಪುಟ್ಟಿಸಿದಕೆ ಪಾಲಿಸಿನ್ನು||

ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 24 ||


ಸತ್ಯವಾದ ನಾಮಗಲನು|ನಿತ್ಯದಲ್ಲಿ ಪಠಿಸುವರಿಗೆ ||

ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 25 ||



ಮರೆಯದಲೆ ಹರಿಯ ನಾಮ|ಬರೆದು ಓದಿ ಪೇಳ್ದವರಿಗೆ ||

ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 26 ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು