॥ ರಾಮ ಸ್ತುತಿ ॥
Belaguru swamiji, belaguru bhajan lyrics
ರಾಗ : ಕಲ್ಯಾಣಿ
ತಾಳ : ಆದಿ
॥ ಜಯ ಜಯ ರಾಮ । ಜಯ ಘನಶ್ಶಾಮ ।
ಜಯ ಶ್ರೀರಾಮ ರಾಮ || ರಾಮ
ಜಯ ಜಯ ಶ್ರೀರಾಮ ॥ ಜಾನಕಿ ರಮಣ |
ಭವ ಭಯ ಹರಣ | ಅಗಣಿತ ಗುಣಧಾಮ।
ರಾಮ | ಅಗಣಿತ ಗುಣಧಾಮ | ಜಯ ಜಯ ರಾಮ ॥
॥ ಅಂದು ಬಾಲ್ಯದೆ । ಒಂದೇ ಬಾಣಾದಿ ।
ಕೊಂದನು ತಾಟಕಿ| ದಾನವಿಯಾ ॥
ಧೀರಭಾವದಿ । ಭಾರವ ವಹಿಸಿದ ।
ಗುರುವಿನ ಯಾಗದ ರಕ್ಷಣೆಯಾ||ಜಯ ಜಯ ರಾಮ ||
ಪಾಶಾಣದೊಳು ಪ್ರಾಣವ ತುಂಬಿದ ।
ಪಾವನ | ಪದರಾಮ | ರಾಮ ||
ಜಯ ಜಯ ಶ್ರೀರಾಮ||ಜಾನಕಿ ರಮಣ ॥ 1 ||
ಜನಕನ ಸಭೆಯೊಳು । ಘನಶಿವ ಧನುವನು ।
ಕ್ಷಣದಲಿ ತೃಣಸಮ ಖಂಡಿಸಿದಾ ॥
ಸುರವರರು ಸುಮ | ಮಳೆಗರೆಯೇ ।
ಧರಣಿಗೆ ಹೃದಯ ದಿ ಮಂಡಿಸಿದಾ ||
ಜಯ ಜಯ ರಾಮ |
ಭಾರ್ಗವ ರಾಮನ ಗರ್ವವಿರಾಮ|
ಭಾಸ್ಕರ ಕುಲಸೋಮ ।ರಾಮ ||
ಜಯ ಜಯ ಶ್ರೀರಾಮ||ಜಾನಕಿ ರಮಣ || 2 ||
ಪಿತೃವಾಕ್ಯ ಪರಿಪಾಲನೆಗಾಗಿ|
ಸಿಂಹಾಸನವನ್ನೇ ತೊರೆದ ॥
ರಘುಕುಲನೀತಿಯ । ರಕ್ಷಣೆಗಾಗಿ ।
ವನವಾಸಕೆ ತಾ । ನಡೆದ ॥ ಜಯ ಜಯ ರಾಮ ॥
ಭರತನ ಹೃದಯದಿ । ನಿರುತವು ನೆಲೆಸಿದೆ ।
ಭಾಸುರ ಗುಣಧಾಮ । ರಾಮ |
ಜಯ ಜಯ ಶ್ರೀರಾಮ ॥ ಜಾನಕಿ ರಮಣ ॥ 3||
ಸೀತೆಯ ಕೋರಿದ । ಮಾಯಾಮೃಗವನು ।
ಹುಡುಕುತ ಹೊರಟನು ರಾಘವನು ॥
ಸಮಯವ ಸಾಧಿಸಿ । ಸೀತೆಯನ್ಹರಿಸಿದ ।
ಸಾದುವೇಷದಿ । ರಾವಣನು ॥ಜಯ ಜಯ ರಾಮ ॥
ಸೀತೆಯ ಕಾಣದೆ । ಶೋಕಾನಲದೀ ನೊಂದನು । ರಘುರಾಮ | ರಾಮ |
ಜಯ ಜಯ ಶ್ರೀರಾಮ ॥ ಜಾನಕಿ ರಮಣ ॥ 4 ||
॥ ಕೌಂತೆಯ ಕಾಣದೆ । ಕಾನ್ಯಾನದೊಳು ।
ಶಾಂತಿಯ ಕಾಣದೇ ತಾ ಹೊರಟಾ ॥
ದ್ವೀಪನ ಪ್ರಾಂತ್ಯದಿ|ವಾಯುತನಯನ ।
ವಿಮಲದಿ ಪ್ರೇಮವ | ತಾ ಪಡೆದ ॥
ಜಯ ಜಯ ರಾಮ ॥
ವಾಲಿಯ ವಧಿಸಿದ । ವಾನರ ಕುಲವಾ ।
ಹರಸಿದ ಪದರಾಮ ॥ ರಾಮ |
ಜಯ ಜಯ ಶ್ರೀರಾಮ ॥ ಜಾನಕಿ ರಮಣ ॥ 5 ||
ಧೀರಾ ಹನುಮನು । ವಾರಿಧಿದಾಂಟಲು ।
ಆಯಿತು ಸೇತುವೆ । ನಿರ್ಮಾಣಾ ॥
ಘೋರ ಸಮರದಿ । ಹರಿಸಿದ ರಾಮಾ ।
ದಶಕ೦ಧರನಾ ಪ್ರಾಣವನು । ಜಯ ಜಯ ರಾಮ ॥
ಧರ್ಮವೆ ಪ್ರಾಣ । ದೀಕ್ಷಾಭರಣ ।
ಜ್ಞಾನದ ನಿಧಿ ರಾಮಾ | ರಾಮಾ ।
ಜಯ ಜಯ ಶ್ರೀರಾಮ ॥ ಜಾನಕಿ ರಮಣ ॥ 6||
1 ಕಾಮೆಂಟ್‌ಗಳು
ಅದ್ಭುತ
ಪ್ರತ್ಯುತ್ತರಅಳಿಸಿ