|| ಗಣಪತಿ ಸ್ತುತಿ ||
Ganapathi bhajan, kannada bhajan lyrics |
ಶುದ್ಧ ಬ್ರಹ್ಮ ಪರಾತ್ಪರ ಗಣಪ
ಮಾಯಾ ನಿರ್ಮಿತ ವಿಗ್ರಹ ಗಣಪ |
ಮೋದಕಪ್ರಿಯ ಕರುಣಾಕರ ಗಣಪ
ಮೂಶಿಕವಾಹನ ರತ್ನದ ಗಣಪ || ಪಲ್ಲವಿ ||
ಶಂಕರ ಪ್ರಿಯ ವಿದ್ಯಾದಿಪ ಗಣಪ
ಏಕದಂತ ಶಕ್ತಿಪ್ರದ ಗಣಪ |
ಲಂಬೋದರ ಗಜವದನ ಗಣಪ
ಅಂಬಾಸುತ ಸುಖದಾಯಕ ಗಣಪ || ೧ ||
ಮಾತೆಯ ಆಜ್ಞೆಯ ನಡೆಸಿದ ಗಣಪ
ಕಾರ್ಯ ಶ್ರದ್ಧೆಯ ತೋರುವ ಗಣಪ
ಯುಕ್ತಿಲಿ ಬ್ರಹ್ಮಾಂಡವ ಸುತ್ತಿದ ಗಣಪ
ಚಂದ್ರನ ಗರ್ವವನಿಳಿಸಿದ ಗಣಪ || ೨ ||
ಸುರ ವಂದಿತ ಮಹಾತ್ಮನೇ ಗಣಪ
ಭಜಿಸಿದವರ ಪರಿಪಾಲಿಪ ಗಣಪ
ವಿಘ್ನ ವ ನೋಡಿಪ ಶಕ್ತನೆ ಗಣಪ
ಕಾರ್ಯವ ಸುಲಭವ ಮಾಡುವ ಗಣಪ || ೩ ||
ವಿದ್ಯಾ ಬುದ್ಧಿಯ ನೀಡುವ ಗಣಪ
ಜಗದ ಕಷ್ಟವ ಮರೆಸುವ ಗಣಪ
ಶಾಂತಿ ಸೌಖ್ಯಗಳ ನೀಡುವ ಗಣಪ
ಎಲ್ಲಕು ಯುಕ್ತಿಯ ತೋರುವ ಗಣಪ || ೪ ||
ಸಂಪತ್ ಸಮೃದ್ಧಿ ನೀಡುವ ಗಣಪ
ಭಕ್ತಿ ಜ್ಞಾನಗಳ ಕರುಣಿಪ ಗಣಪ
ಸರ್ವಶಕ್ತನು ನೀನೇ ಗಣಪ
ಸರ್ವಕೆ ಆದಿಯು ನೀನೇ ಗಣಪ || ೫ ||
ಸರ್ವಶಕ್ತನು ನೀನೇ ಗಣಪ
ಸರ್ವಕೆ ಆದಿಯು ನೀನೇ ಗಣಪ
ತಪ್ಪನು ಮನ್ನಿಸಿ ಸಲಹೋ ಗಣಪ
ಜಯ ಜಯ ವರದಾಯಕ ಗಣಪ || ೬ ||
0 ಕಾಮೆಂಟ್‌ಗಳು