ಧಿಮಿತಕ ಧಿಮಿತಕ ಕುಣಿಯಮ್ಮ-Dhimitaka dhimitaka kuniyamma

|| ದೇವಿ ಭಜನೆ ||



ಧಿಮಿತಕ ಧಿಮಿತಕ ಕುಣಿಯಮ್ಮ

 ಝಣ ಝಣ ಝಣ ಝಣ ಬಾರಮ್ಮ||ಪಲ್ಲವಿ ||


 ಧಿಮಿತಕ ಧಿಮಿತಕ ಕುಣಿಯಮ್ಮ

 ಎನ್ನ ಮನೆಯೊಳು ನಿಲ್ಲಮ್ಮ

 ಅಂಬಾ ಭವಾನಿಯೆ ಬಾರಮ್ಮ

 ಆನಂದದಿಂದಲಿ ನಲಿಯಮ್ಮ    ||೧ ||


 ತುಳಜಾ ಭವಾನಿಯೆ ಬಾರಮ್ಮ

 ತಲ್ಲಣಗೊಳಿಸದಿರು ಕಾಯಮ್ಮ

 ನಾಟ್ಯವಾಡುತ ಬಾರಮ್ಮ

 ನಗುನಗುತಲಿ ಬಂದು ಕೊಡಮ್ಮ   ||೨ ||


 ಗಂಗಾ ಭವಾನಿಯೆ  ಬಾರಮ್ಮ

 ಗಾನವ ಪಾಡುವೆ ಕೇಳಮ್ಮ

 ಮಂಗಳ ದ್ರವ್ಯದಿ ಪೂಜಿಪೆನಮ್ಮ

 ಮಾಂಗಲ್ಯ ಭಾಗ್ಯವ ಕರುಣಿಸಮ್ಮ  || ೩ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು