ನಮ್ಮ ತಂದೆ ಆಂಜನೇಯ ಬಂದ ನೋಡೈ - namma tande anjaneya banda nodai

|| ಹನುಮ ಸ್ತುತಿ ||

Kannada bhajan lyrics, hanuman bhajan lyrics


 ನಮ್ಮ ತಂದೆ ಆಂಜನೇಯ ಬಂದ ನೋಡೈ

ಪ್ರೇಮ ಮಯಿ ವೀರ ಹನುಮ ಬಂದ ನೋಡೈ 

ಅಕೋ ಬಂದ ನೋಡೈ ಇಕೋಬಂದ ನೋಡೈ ||ಪಲ್ಲವಿ ||


ವಾಯುಪುತ್ರನೆಂಬ ಗುರುವು ಬಂದ ನೋಡೈ 

ವಾಮದೇವ ಕಂದನೀಗ ಬಂದ ನೋಡೈ 

ಆಂಜನೇಯನಂಘ್ರಿ ಧ್ಯಾನದಿಂದ ನೋಡೈ

ನಾಮವನ್ನು ಭಕ್ತಿಯಿಂದ ನುಡಿದು ನೋಡೈ ||೧ ||


ಸೂರ್ಯನಿಂದ ವಿದ್ಯೆ ಕಲಿತು ಬಂದ ನೋಡೈ

ವ್ಯಾಕರಣದಲಿ ನಿಪುಣನೀತ ಬಂದ ನೋಡೈ

ಯೋಗಿ ಶ್ರೀ ರಾಘವನ ವಂಶ ನೋಡೈ

ಶ್ರೀಶ ಹನುಮೇಶನ ಚಂದ ನೋಡೈ   || ೨ ||


ರಾಮಚಂದ್ರ ದೂತನಿಂದು ಬಂದ ನೋಡೈ

ಸುರಸೆಯನ್ನು ಗೆದ್ದವನು ಬಂದ ನೋಡೈ

ಸೀತೆಯನ್ನು ಕಂಡವನು ಬಂದ ನೋಡೈ

ಪ್ರಾಣನಾಥ ಈಶಪುತ್ರ ಬಂದ ನೋಡೈ   || ೩ ||


ವೀರ ಹನುಮ ರಾಯನು ಬಂದ ನೋಡೈ

ಪಾದ ಸೇವೆಯನ್ನು ಬಿಡದೆ ಮಾಡಿ ನೋಡೈ

ಏಕಚಿತ್ತದಿಂದ ಧ್ಯಾನವನ್ನು ಮಾಡೈ

ಸುಂದರೇಶ ಮಾರುತಿಯ ಅಂದ ನೋಡೈ   || ೪ ||


ಭಕ್ತರನ್ನು ಪೊರೆಯುವವನು ಬಂದ ನೋಡೈ

ಹೊಳೆಯುತ್ತಿರುವ  ಕಂಗಳನ್ನು ನಿಂದು ನೋಡೈ

ತತ್ವಯುತ ಹನುಮನ ಹಾಡ ಹಾಡೈ

ದಿವ್ಯ ಪಾದದಿಂದ ನಡೆದು ಬಂದ ನೋಡೈ   || ೫ ||


ಭಕ್ತಿ ಭಾವವನ್ನು ತಳೆದು ನಿಂದು ನೋಡೈ

ಹೃದಯ ಶುದ್ಧಿ ಮಾಡಿಕೊಂಡು ಬಂದು ನೋಡೈ

ಭಕ್ತಿಯಿಂದ ವರಗಳನ್ನು ಬೇಡಿ ನೋಡೈ

ಓಡಿ ಓಡಿ ಬೇಗ ಬೇಗ ಬಂದು ನೋಡೈ   || ೬ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು