|| ರಾಘವೇಂದ್ರ ಸ್ತುತಿ ||
Kannada bhajan lyrics, raghavendra bhajan lyrics |
ಶ್ರೀ ಗುರು ಜೈ ಗುರು ರಾಘವೇಂದ್ರ
ಶ್ರಿತ ಜನ ಪಾಲಕ ರಾಘವೆಂದ್ರ || ಪಲ್ಲವಿ ||
ದೀನ ದಯಾಪರ ರಾಘವೇಂದ್ರ
ಜ್ಞಾನನಿಧಿಯೇ ಶ್ರೀರಾಘವೇಂದ್ರ
ಗಾನ ಲೋಲ ಶ್ರೀ ರಾಘವೇಂದ್ರ
ಗಾನವಿಶಾರದ ರಾಘವೇಂದ್ರ || ೧ ||
ವೀಣಾ ಚತುರನೆ ರಾಘವೇಂದ್ರ
ವೇಣುಗಾನ ಪ್ರಿಯ ರಾಘವೇಂದ್ರ
ಪರಿಮಳ ರಚಿಸಿದ ರಾಘವೇಂದ್ರ
ಪರಿಹರಿಸೈ ಭವ ರಾಘವೇಂದ್ರ || ೨ ||
ಪ್ರಹ್ಲಾದಂಶನೆ ರಾಘವೇಂದ್ರ
ಆಹ್ಲಾದವ ಕೊಡು ರಾಘವೇಂದ್ರ
ವಾಸುಕಿಯಂಶನೆ ರಾಘವೇಂದ್ರ
ವ್ಯಾಸ ಯತಿಯು ನೀನೆ ರಾಘವೇಂದ್ರ || ೩ ||
ಶ್ರೀ ಸುಧೀಂದ್ರ ಸುತ ರಾಘವೇಂದ್ರ
ದಾಶರಥಿಯ ಪ್ರಿಯ ರಾಘವೇಂದ್ರ
ಮೂಲ ರಮಾರ್ಚಕ ರಾಘವೇಂದ್ರ
ಬಾಲನ ಪೊರೆದೆಯೋ ರಾಘವೇಂದ್ರ || ೪ ||
ಕಾಮಿತ ಫಲದನೆ ರಾಘವೇಂದ್ರ
ಪ್ರೇಮವಿದೆನ್ನೊಳು ರಾಘವೇಂದ್ರ
ಗಂಧ ಲೇಪ ಪ್ರಿಯ ರಾಘವೇಂದ್ರ
ಸುಂದರ ಮೂರುತಿ ರಾಘವೇಂದ್ರ ||೫ ||
ತಂದೆ ತಾಯಿ ನೀನೆ ರಾಘವೇಂದ್ರ
ಕಂದನೆಂದು ತಿಳಿ ರಾಘವೇಂದ್ರ
ಮೂಢಗಿತ್ತೆ ಜ್ಞಾನ ರಾಘವೇಂದ್ರ
ಅವನಾದಿಗೊಡೆಯನಾದ ರಾಘವೇಂದ್ರ || ೬ ||
ಭಕ್ತ ಜನಾಶ್ರಯ ರಾಘವೇಂದ್ರ
ಶಕ್ತಿ ನೀನೆ ಸರಿ ರಾಘವೇಂದ್ರ
ಸಾಸಿರ ವಂದ್ಯನೆ ರಾಘವೇಂದ್ರ
ಕ್ಲೇಶ ಹರಿಸಿ ಪೊರೆ ರಾಘವೇಂದ್ರ || ೭ ||
ಮಂತ್ರಾಲಯ ದೊರೆ ರಾಘವೇಂದ್ರ
ಸಂತಾಪವ ಕಳೆ ರಾಘವೇಂದ್ರ
ಸರ್ವಶಕ್ತ ನೀನೆ ರಾಘವೇಂದ್ರ
ಸರ್ವಜನಪ್ರಿಯ ರಾಘವೇಂದ್ರ || ೮ ||
ಶಾಂತ ಮೂರ್ತಿ ಶ್ರೀ ರಾಘವೇಂದ್ರ
ಭ್ರಾಂತಿಯ ಬಿಡುಪುದು ರಾಘವೇಂದ್ರ
ಕೃಷ್ಣಮೂರ್ತಿ ಶ್ರೀ ರಾಘವೇಂದ್ರ
ಸಾಷ್ಟಾಂಗವು ನಿನಗೆ ರಾಘವೇಂದ್ರ || ೯ ||
ಅಗಣಿತ ಮಹಿಮನೆ ರಾಘವೇಂದ್ರ
ಸುಗುಣ ಗುಣಾರ್ಣವ ರಾಘವೇಂದ್ರ
ಶರಣರ ಸುರವರ ರಾಘವೇಂದ್ರ
ಪರಮ ಪುರುಷ ಪೊರೆ ರಾಘವೇಂದ್ರ || ೧೦ ||
ಪತಿತ ಪಾವನನೆ ರಾಘವೇಂದ್ರ
ಸತತ ಭಜಿಪ ಪೊರೆ ರಾಘವೇಂದ್ರ
ಕರುಣಿಗಳರಸನೆ ರಾಘವೇಂದ್ರ
ವರಗುರು ರಾಜನೆ ರಾಘವೇಂದ್ರ || ೧೧ ||
ಚಿಂತಿತಾರ್ಥಪ್ರದ ರಾಘವೇಂದ್ರ
ಶ್ರೀಕಾಂತ ವಿಠಲನಾಥ ರಾಘವೇಂದ್ರ
ಜಯ ಮಂಗಳಂ ಗುರು ರಾಘವೇಂದ್ರ
ಜಯ ಶುಭ ಮಂಗಳ ರಾಘವೇಂದ್ರ || ೧೨ ||
0 ಕಾಮೆಂಟ್‌ಗಳು