ಆವ ಕುಲವೋ ರಂಗ ಅರಿಯಲಾಗದು
kannadabhajanlyrics.com |
ಆವ ಕುಲವೋ ರಂಗ ಅರಿಯಲಾಗದು,
ಆವ ಕುಲವೋ ರಂಗ ಅರಿಯಲಾಗದು
ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ
ದೇವ ಲೋಕದ ಪಾರಿಜಾತವ ಹೂವ ಸತಿಗೆ ತಂದನಂತೆ
||ಪಲ್ಲವಿ||
ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ
ಕೊಳಲನೂದಿ ಮೃಗ ಪಕ್ಷಿಗಳ ಮರಳು ಮಾಡಿದನಂತೆ
ತರಳತನದಿ ವರಳ ಸೆಗಹಿ ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗೀರೇಳುಲೋಕವ ಇರಿಸಿ ತಾಯಿಗೆ
ತೋರ್ದನಂತೆ||1|
ಗೊಲ್ಲತಿಯರ ಮನೆಯ ಪೊಕ್ಕು ಕಳ್ಳತನವ ಮಾಡಿದನಂತೆ
ಗೊಲ್ಲರ ಪೂತನಿ ವಿಷವನುಂಡು ಮೆಲ್ಲನೆ ಧ್ರಡನ ಕೊಂದನಂತೆ
ಪಕ್ಷಿ ತನ್ನ ವಾಹನನಂತೆ ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದು ಮುಖದ ಚೆಲ್ವನಂತೆ॥|2॥
ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ
ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ ಕಡಲ ತಡಿಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ॥3॥
0 ಕಾಮೆಂಟ್‌ಗಳು