ದೇವಿ ಸ್ತುತಿ
Kannadabhajanlyrics.com |
ದೇವಿ ದೇವಿ ಜಗದಾಂಬ ದುರ್ಗಾ ದೇವಿ ಜಗದಾಂಬ
ದೇವಿ ದೇವಿ ಜಗದಾಂಬ ದುರ್ಗಾ ದೇವಿ ಜಗದಾಂಬ
||ಪ ||
ಮಹಿಷಾಸುರನ ವಧೆ ಮಾಡಿ
ಮೈಸೂರಿನಲ್ಲಿ ಸ್ಥಿರವಾದೆ
ಚಾಮುಂಡೇಶ್ವರಿ ನೀನಾದೆ 2
ದೇವಿ ದೇವಿ ಜಗದಾಂಬ || ೧ ||
ಮೂಕಾಸುರನ ವಧೆ ಮಾಡಿ
ಕೊಲ್ಲೂರಿನಲ್ಲಿ ಸ್ಥಿರವಾದೆ
ಮೂಕಾಂಬಿಕೆಯು ನೀನಾದೆ 2
ದೇವಿ ದೇವಿ ಜಗದಾಂಬ ||೨ ||
ಶಂಕರಾಚಾರ್ಯರಿಗೆ ಕೃಪೆಗೈದು
ಶೃಂಗೇರಿಯಲ್ಲಿ ಸ್ಥಿರವಾದೆ
ಶಾರದಾಂಬೆಯು ನೀನಾದೆ 2
ದೇವಿ ದೇವಿ ಜಗದಾಂಬ || ೩ ||
ಭಕ್ತರ ಮೊರೆಯನು ಆಲಿಸುತ
ಶಿವಮೊಗ್ಗದಲ್ಲಿ ಸ್ಥಿರವಾದೆ
ಸೀತಾದೇವಿಯು ನೀನಾದೆ 2
ದೇವಿ ದೇವಿ ಜಗದಾಂಬ || ೪ ||
ಬಿಂದುಮಾಧವಗೆ ನೀನೊಲಿದು
ಬೆಲಗೂರಿನಲ್ಲಿ ಸ್ಥಿರವಾದೆ
ಮಹಾಲಕ್ಷ್ಮಿಯು ನೀನಾದೆ 2
ದೇವಿ ದೇವಿ ಜಗದಾಂಬ || ೫ ||
ಹಾಡುವುದು ಹೀಗೆ 👇
0 ಕಾಮೆಂಟ್‌ಗಳು