|| ಹರಿ ಸ್ತುತಿ ||
kannadabhajanlyrics.com |
ಶೇಷಗಿರಿದೊರೆ, ನಮ್ಮ ಶ್ರೀನಿವಾಸನ ಕಂಡೆ |
ಕಂಡೆ ಶ್ರೀನಿವಾಸನ ॥ಪ॥
ಶ್ರೀನಿವಾಸನ ಕಂಡೆ ಶ್ರೀನಿವಾಸನ ಜ್ಞಾನಗುರು
ಮಧ್ವ ಮುನಿ ಮಾನುಷ ಹಂಸನ ಕಂಡೆ || ಅ. ಪ ||
ಗರುಡ ಶೇಷ ಗಿರಿಜಾ ರಮಣ ಸುರರೆಲ್ಲ,
ನಿರುತ ಸೇವಿಸುವ ಪಾದ
ಸರಸಿಜ ಯುಗಳವ ಕಂಡೆ ||೧||
ಮಾನಿನಿ ರಮಾದೇವಿ ವರ್ಣಿಸುತಲಿ,
ದಾನವಾಂತಕನ ಪಾದಜಾನು ಜಂಘೆಗಳನು ಕಂಡೆ||೨||
ಪರಮಾತ್ಮನ್ನ ಗುಣಗಳನ್ನುವರ್ಣಿಸುತಲೀ,
ಸಿರಿದೇವಿ ಇರುವ ವಕ್ಷ ಸ್ಥಳವನ್ನು ಕಣ್ಣಾರೆ ಕಂಡೆ||೩||
ವಾಸವಾಗರ್ಜುನನ ರಥದ ಮುಂದೆ ನಿಲ್ಲುವನ,
ಏಸು ಮಮತೆಯಿಂದ ಕುಣಿವ
ಹರಿಯ ಹಸ್ತಂಗಳ ಕಂಡೆ || ೪ ||
ಮಂದಗಮನ ಗೋಪಿ ಕಂದ ಬಾರೆಂದೆನ್ನಲು
ಮಂದಹಾಸದಿಂದ ನಗುವ ಸುಂದರ ವದನನ್ನ್ನ ಕಂಡೆ ||೫||
ಕುಕ್ಷಿಯೊಳಗೀರೇಳು ಜಗವ ರಕ್ಷಿಸುವನ,
ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀರಮಣನ್ನಾ ಕಂಡೆ ||೬||
ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ,
ಪುಂಡರಿಕಾಕ್ಷ ಶ್ರೀ ವೆಂಕಟವಿಠಲನ ಕಂಡೆ ||೭||
0 ಕಾಮೆಂಟ್‌ಗಳು