ಕುಣಿಯುತ ನಲಿಯುತ ಬಾ ಶಿವಶಂಕರ

 ಶಿವಸ್ತುತಿ

kannadabhajanlyrics.com
 kannadabhajanlyrics.com 

ಕುಣಿಯುತ ನಲಿಯುತ ಬಾ ಶಿವಶಂಕರ

ಮಣಿಯುವ ನಿನ್ನಡಿಗೆರಗುವೆ ಅನುದಿನ || ಪ ||


 ಢಮ ಢ ಮ ಢ ಮ ಎಂದು ಢಮರುಗ ಧ್ವನಿಸಲ್

 ಠಣಠಣಠಣ ಎಂದು ವೃಷಭವು ನಲಿಯೇ

 ಝಣ ತಕತಕ ಝಣ ತಾಕಿಟ ತಕಕಿಟ ಝಣ

 ಎಂದು ನಂದಿ ಮೃದಂಗವ ಬಾರಿಸಲ್ || ೧ ||


 ಹರ ಹರ ಹರ ಎಂದು ಗಣಗಳು ಸ್ತುತಿಸಲು

 ಪೊರೆಯೆಂದಿಹೆವಿದ್ದು ಗಂಗೆಯು ನಮಿಸೆ

 ಸರಿಗಮಪನಿಸ ಸ್ವರಗಳ ಪಾಡುತ

 ನಾರದ ತುಂಬುರರ್ ಗಾನವ ಮಾಡಲು || ೨ ||


 ವರ ಕಮಲೇಶನ ಚರಿತೆಯ ಜಗದೊಳು

 ಪರಿಪರಿ ಭಾವದಿ ನರ್ತಿಸಿ ತೋರುತ

 ಕೊರೆಯುವ ಭಕುತರ ವರವೀಯುತ ಬಾ

 ಗಿರಿಜಾಲಿಂಗಿತ ನಾಟ್ಯಾಚಾರ್ಯ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು