ಬಾರೇ ವೆಂಕಟ ರಮಣ ಶ್ರೀದೇವಿ ಬಾರೇ

 || ಲಕ್ಷ್ಮಿ ದೇವಿಯ ಹಾಡು ||

kannadabhajanlyrics.com
kannadabhajanlyrics.com


ಬಾರೇ ವೆಂಕಟರಮಣಿ  ಶ್ರೀ ಶ್ರೀದೇವಿ

ಬಾರೇ ವೇಂಕಟರಮಣೀ ॥ಪ॥

ಬಾರೇ ವೆಂಕಟರಮಣಿ ಪಾರಾಯಣ ಕೇಳು ।

ಚಾರುವದನೆ ಉಪಹಾರಾ ಕಾಲಕೆ ನಿತ್ಯ ಬಾರೆ

ವೆಂಕಟರಮಣೀ ॥ಅಪ॥


ಸ್ವಪ್ನದ ದೊಳಗೆ ಬರುವಿ ಶ್ರೀ ಶ್ರೀದೇವಿ

ಕ್ಷಿಪ್ರ ತನದಿ ಪೋಗುವಿ |

ಸರ್ಪ ಶಯನ ನಮ್ಮಪ್ಪ ಗೋಕುಲಬಾಲ

ಅಪ್ಪಿಕೊಳ್ಳುವ ಸುಖ ಒಪ್ಪಿಸೇ ಬೇಗನೆ || ೧ ||


ಏನು ಪುಣ್ಯವೆನಂದು ಪಾರಾಯಣ

ನೀನು ಕೇಳುವೆ ಬಂದು 

ಹೀನ ಮಾನವರಿಗೆ ನಾನೆ ಬರುವೆನೆಂಬೊ

ಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಕೊಡೆ || ೨ ||


ಎಲ್ಲ ದೇವತೆಗಳನು ತಡೆದಿಹೆ

ಪುಲ್ಲವಾರಿಜನಯನೆ ।

ಗೊಲ್ಲ ಬಾಲನಪದ ಪಲ್ಲವ ನೋಡದೆ

ನಿಲ್ಲವಲ್ಲದು ಮನಸೊಲ್ಲು ಲಾಲಿಸಿ ಬೇಗ ॥೩॥


ಮಂಗಳಾಂಗಿಯೆ ನಿನ್ನ ಕಾಣದೆ

ಬಲುಭಂಗ ಪಡುವೆ ನಮ್ಮ |

ರಂಗ ಜನಕ ಶ್ರೀ ರಂಗನಂಕದಿ ಕುಳಿತು

ಭೃಂಗ ಕುಂತಳೆ ಹೃದಯಾಂಗನದೊಳಗಾಡೆ ॥೪॥


 ಇಂದಿರೇಶನ ರಾಣಿ ಎನ್ನಯ

ಮನಮಂದಿರದೊಳು ಬಾ ನೀ

ನಂದ ಗೋಕುಲ ಬಾಲ ನಿಂದು

ಕರದೊಳೆತ್ತಿ ತಂದು ತೋರಿಸೆ

ಆರವಿಂದ ನಯನೆಲಕ್ಷ್ಮಿ       || ೫ || 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು