ಜಾಣ ಹನುಮಂತನ ಕಂಡೀರಾ - Jaana Hanumanthana Kandira

 || ಹನುಮಂತ ಸ್ತುತಿ  ||

kannadabhajanlyrics.com
kannadabhajanlyrics.com


ಜಾಣ ಹನುಮಂತನ ಕಂಡೀರಾ ಗುಣಸಾಗರ ಮಹಿಮಾ

 ಬಾಲ ಹನುಮಂತನ ಕಂಡೀರಾ ಆ....... ಆ........ ಆ.......


 ಅಂಜನ ತನಯ ವೀರಾಂಜನೇಯ 

ಪಿಂಗಳ ಕಾಯ ಪವನಜ ಹನುಮ

 ಸಂಜೀವನ ಸಿರಿ ತಂದ ಪ್ರಾಣೇಶ

 ಅಂಗದ ಪ್ರಮುಖ ವಾನರ ಧೀರ    || ೧ ||


ಭಾರತಿ ರಮಣ ರಾಮನ ಪ್ರಾಣ

ಭುಜ ಬಲವಂತ ಭೀಮಸೇನ ಆ.....

ವಜ್ರ ಶರೀರ ಸಜ್ಜನ ಪ್ರೇಮ 

ಮಧ್ವ ಮತ ಗುರು ಮುದ್ದು ಹನುಮ  || ೨ ||


 ಸಿಂಧುವ ದಾಟಿ ಸೀತೆಯ ಕಂಡು

 ಚಂದ ಚೂಡಾಮಣಿ ವಂದಿಸಿ ನೀಡಿ

 ಸುಂದರ ಲಂಕೆಯ ಬೆಂಕಿಲಿ ಉರಿಸಿ

 ಲಂಕಾ ನಾಥನ ಬಿಂಕವ ಮುರಿದ   || ೩ ||


ಪಾಂಡವ ನಂದನ ಕಲಿ ವರ ಭೀಮ

 ಚಂಡ ಪ್ರಚಂಡ ಸಿರಿ ಉದ್ದಂಡ ಆ....

 ಚಂಡ ವೈರಿಗಳ ಖಂಡಿಸಿ ಕೋಪದಿ

 ಮಂಡೆಗೆ ಕರುಳನು ಮುಡಿಸಿದ ಸತಿಗೆ  || ೪ ||


 ಸಜ್ಜನ ಪ್ರೇಮ ದುರ್ಜನ ವೈರಿ

 ಅರ್ಜುನ ಸೋದರ ವಜ್ರ ಉಜ್ವಲ

 ಮಧ್ವರ ರೂಪ ಸಿದ್ಧರ ದೀಪ

 ರಾಮನ ದೂತ ವರ ಹನುಮಂತ || ೫ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು