|| ಪಾರ್ವತಿ ಸ್ತೋತ್ರ ||
ರಚನೆ : ಶ್ರೀ ಪ್ರಾಣೇಶದಾಸರು
ರಾಗ : ಪೂರ್ವಿ ಕಲ್ಯಾಣಿ
kannadabhajanlyrics.com |
ಪಾರ್ವತಿ ದಕ್ಷ ಕುಮಾರಿ ಪಾರ್ವತಿ ||ಪ|
ಪಾರ್ವತಿ ದಕ್ಷಕುಮಾರಿ ನಿನ್ನ |
ಸಾರ್ವೆ ಸಂತತ ಕುಜನಾರೀ ॥|ಆಹಾ॥
ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ॥
ಚಾರ್ವಾಕ ವತಿ ಕೀಳಿ ತೋರ್ವದು ಸುಪಥವ ॥ಅ.ಪ.॥
ದುರ್ಗೆ ಭವಾನಿ ರುದ್ರಾಣಿ ಗೌರಿ |
ಸ್ವರ್ಗಜನಾರಾಧ್ಯ ಮಾನಿ ॥
ಸೇರೆ ದುರ್ಗುಣದವರ ಸುಜ್ಞಾನಿ |
ಭಕ್ತವರ್ಗ ಪೋಷಕ ಶುಕ ವಾಣೀ ॥ ಆಹಾ॥
ನಿರ್ಗುಣರಾದುತ್ತಮರ್ಗೆವೊಲಿವ ಅಪ |
ವರ್ಗದ ನಾಳೆ ನರರ್ಗೆ ಮಣಿಸದಿರೆ ॥1॥
ಚಂಡಿ ಕಾತ್ಯಾಯಿನಿ ಉಮಾ ನಾಲ್ಕು |
ಮಂಡೆಯವನ ಸೊಸೆ | ಯಮ್ಮಾ |
ನಾಡೆ ಕಂಡು ಭಜಿಪೆ ನಿತ್ಯ ನಿಮ್ಮ |
ಪಾದ ಪುಂಡರೀಕ ದ್ವಯವಮ್ಮಾ ॥ಆಹಾ॥
ಉಂಡ ವಿಷವ ನಿನ್ನ ಗಂಡ ಬಳಲಿ ಕೈ |
ಕೊಂಡೌಷಧ ತಂಡ ತಂಡದಲೆನಗೀಯೆ ॥2॥
ಪಾವಕನೊಳು ಪೊಕ್ಕ ಪತಿವ್ರತೆ |
ಯಾವಾಗ ಮಾನಿಸತ್ಕಥೆ |
ಯಲ್ಲಿಭಾವನೆ ಕೊಡೆ ಪ್ರತಿ ಪ್ರತಿ।
ಜಾವ ಜಾವಕೆ ಷಣ್ಮುಖಮಾತೆ ॥ಆಹಾ|
ಕೋವಿದರೊಡತಿ ಕೇಳಾವಾಗ ವೈರಾಗ್ಯ |
ವೀವುದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ ॥3॥
ಬೇಡಿದಭೀಷ್ಟವ ಕೊಡುವೆ |
ದಯ ಮಾಡಿ ಭಕ್ತರ ಕರಪಿಡಿವೆ |
ದೋಷ ಕಾಡುಳಿಯದಂತೆ ಸುಡುವೆ |
ನಿನ | ಗೀಡೆ ಮಹದ್ಭಯಕಡಿವೆ |ಆಹಾ|
ರೂಢೀಶ ಶಿವನೆಂದು ಆಡಿಸದಿರು ಬುದ್ಧಿ |
ಗೇಡಿ ದಾನವರಂತೆ, ನೀಡು ಶ್ರೀಹರಿ ಸೇವೆ |॥4॥
ಮೇಶ ಪ್ರಾಣೇಶ ವಿಠ್ಠಲನೆ |
ಜಗದೀಶನೆಂಬುವ ದಿವ್ಯ ಜ್ಞಾನ ಕೊಟ್ಟು |
ಪೋಷಿಪುದೆನ್ನ ಸುಜಾಣೆ |
ನೀನುದಾಸಿಸೆ ನಾನಾರಕಾಣೆ ||ಆಹಾ|
ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |
ಈ ಶರೀರದೊಳಿಹ್ಯ ಘಾಸಿ ಮಾಡುವನನ್ನು ॥5॥
0 ಕಾಮೆಂಟ್‌ಗಳು