|| ಅಂಬಾ ಸ್ತುತಿ ||
ಅಂಬಾ ನೀನೆ ಜಾಣೆ। ನಂಬಿದೆನು ಕಾಣೆ |
ಇಂಬಿಲ್ಲದೆ ಲೋಕವಾಗಿ ತುಂಬಿಕೊಂಡೆ ನೀನೆ ॥ಪಲ್ಲವಿ॥
ನಿನ್ನ ಕೂಡಿದಾಭಾಸಾ ತಾನೀಶಾನಾದಾ ಕಾಣೆ
ನಿನ್ನ ತಿಳದ ಮೇಲೆ ಜನ್ಮ ಪಾಶವಿನ್ನುಂಟೇನೇ॥ ೧
ಮಾಯೆಯೆಂದು ಪೇಳಿ ನಿನ್ನ ತಾಯಿಯೆಂದೊಡೇನೇ।
ಮಾಠ ಯೆಂದು ಪೇಳುವಲ್ಲೆ ಕಾಯವಿಲ್ಲ ಕಾಣೆ || ೨.
ಅಲ್ಲಿ ಇಲ್ಲಿ ತೋರಿತೆಂಬುದೆಲ್ಲ ನೀನೆ ಕಾಣೆ|
ಇಲ್ಲ ಉಂಟು ಉಂಟಿಲ್ಲೆಂಬುದಲ್ಲದವಳು ನೀನೆ || ೩.
ಹೊನ್ನು ಹೆಣ್ಣು ಸಂಪತ್ತಿದು ನಿನ್ನ ಮಹಿಮೆ ಕಾಣೆ |
ಯನ್ನೊಳು ನೀನಿರ್ದ ಮೇಲೆ ಭಿನ್ನವಿನ್ನುಂಟೇನೇ॥
ಮರತು ನಿನ್ನ ಕಾರ್ಯವನು ಮರಣವಾಯ್ತು ಕಾಣೆ!
ಗುರುಶಂಕರ ನೋಳ್ ಕೂಡಿ
ನೀನೆ ಪರಿಪರಿಯಾದೆ ಕಾಣೆ ॥ ಅಂಬಾ॥ ೫
0 ಕಾಮೆಂಟ್‌ಗಳು