|| ದೇವಿ ಸ್ತುತಿ ||
ರಚನೆ : ಶ್ರೀ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳು
ರಾಗ :: ಕಲ್ಯಾಣಿ
ತಾಳ : ಆದಿ
ಅಂಬಾ ನೀ ಜಾಣೆ ನಂಬಿದೆವು ಕಾಣೆ
ಇಂಬಿಲ್ಲಾದೀ ಲೋಕವೆಲ್ಲಾ ತುಂಬಿಕೊಂಡೆ ಕಾಣೆ||ಪ||
ಅಂಬಾ ನೀನೇ ಜಗದಂಬಾ ನೀನೇ ||ಅ. ಪ.||
ಮಾಯೆಯೂ ನೀನೆ | ಮಹಾಮಾಯೆ ನೀನೇ
ಮಹಿಷಾಸುರ ನೆಂಬೋ|ದೈತ್ಯನ|
ಕೊಂದುಬಿಟ್ಟೆ ಕಾಣೆ||೧||
ಕಾಳಿಯು ನೀನೆ | ಮಹಾ ಕಾಳಿ ನೀನೆ ||
ಕಾಕಾಸುರ ನೆಂಬೋ|
ದೈತ್ಯನ ಕೊಂದುಬಿಟ್ಟೆ ಕಾಣೆ||೨
ಶಕ್ತಿಯು ನೀನೇ | ಆದಿಶಕ್ತಿಯು ನೀನೆ
ರಕ್ತಬೀಜ ನೆಂಬೊ|
ದೈತ್ಯನ ಕೊಂದುಬಿಟ್ಟೆ ಕಾಣೆ||೩
ಚಂಡಿಯು ನೀನೇ | ಚಾಮುಂಡಿಯು ನೀನೆ ||
ಚಂಡ-ಮುಂಡರೆಂಬೋ|
ದೈತ್ಯರ ಕೊಂಡುಬಿಟ್ಟೆ ಕಾಣೆ||೪.
ಹೆಣ್ಣು ಮಣ್ಣು ಹೊನ್ನು ಮೂರು|ನಿನ್ನ ಮಾಯ ಕಾಣೆ ||
ನಿನ್ನ ಮಾಯ ಕಾಣೆ|
ನಾ ತಿಳಿಯಲಾರೆ ಜಾಣೆ || ೫||
0 ಕಾಮೆಂಟ್‌ಗಳು