Kannadabhajanlyrics.com || ಗಣಪತಿ ಸ್ತುತಿ ||
ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಬಾಳಿನ ಕಲ್ಪತರು ನೀನೆ॥
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಮಾಡಿ ಹರಸು ಎಂದು
ನಿನ್ನ ಸನ್ನಿಧಾನಕೆ ತಲೆಬಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀ ದಯಾ ಸಿಂಧು ॥1॥
ಈರೇಳು ಲೋಕದ ಅಣು ಅಣುವಿನ
ಇಹ ಪರದ ಸಾಧನಕೆ ನೀನೇ ಕಾರಣ
ನಿನ್ನೊಲುಮೆ ನೋಟ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ ॥2॥
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮನೆನಿಸು ಎನ್ನ
ಪಾದಸೇವೆಯೊಂದೇ ಧರ್ಮ ಸಾಧನ।॥3॥
0 ಕಾಮೆಂಟ್‌ಗಳು