|| ಲಕ್ಷ್ಮಿ ಹಾಡು ||
ಬಾರೆ ಭಾಗ್ಯದ ನಿಧಿಯೆ |
ಕರವೀರ ನಿವಾಸಿನಿ ಸಿರಿಯೆ ।
ಬಾರೆ ಬಾರೆ ಕರವೀರ ನಿವಾಸಿನಿ |
ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ || ಪ ||
ನಿಗಮವೇದ್ಯಳೆ ನೀನು ನಿನ್ನ ಪೊಗಳಲಾಪೆನು ನಾನು|
ಮಗನಪರಾಧವ ತೆಗೆದೆಣಿಸದೆ ನೀ ॥
ಲಗುಬಗೆಯಿಂದಲಿ ಪನ್ನಂಗ ವೇಣಿ ॥೧॥
ಲೋಕ ಮಾತೆಯು ನೀನು ನಿನ್ನ ತೂಕನಲ್ಲವೇ ನಾನು|
ಆಕಳು ಕರುವಿನ ಸ್ವೀಕರಿಸುವ ಪರಿ. ॥
ನೀ ಕರುಣದಿ ಕಾಲ್ಜಾಕೆ ನಮ್ಮನಿಗೆ ॥೨॥
ಕಡೆಗೂ ನಮ್ಮನಿವಾಸ ಎನ್ನೊಡೆಯ ಅನಂತಾದ್ರೀಶ|
ಒಡೆಯನ್ನಿದ್ದಲ್ಲಿಗೆ ಮಡದಿ ಬಾಹುದು. ॥
ರೂಢಿಗುಚಿತವಿದು ನಡೆ ನಮ್ಮನಿಗೆ ॥೩॥
0 ಕಾಮೆಂಟ್‌ಗಳು