ಕೊಡು ಬೇಗ ದಿವ್ಯಮತಿ ಸರಸ್ವತಿ - Kodu Bega Divyamathi Saraswathi

|| ಸರಸ್ವತಿ ಹಾಡು ||

ರಾಗ: ವಸಂತ 

ತಾಳ : ಆದಿತಾಳ 


ಕೊಡು ಬೇಗ ದಿವ್ಯಮತಿ | ಸರಸ್ವತಿ ||ಪ ||

ಮೃಡ ಹರಿ ಹಯಮುಖರೊಡೆಯಳೆ - ನಿನ್ನಯ |

ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ ॥ಅ. ಪ ||


ಇಂದಿರಾರಮಣನ ಹಿರಿಯ ಸೊಸೆಯು ನೀನು ॥

ಬಂದೆನ್ನ ವದನದಿ ನಿಂದು ನಾಮವ ನುಡಿಸೆ ॥೧॥


ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ |

ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨॥


ಪತಿತ ಪಾವನೆ ನೀ । ಗತಿಯೆಂದು ನಂಬಿದೆ ।

ಸತತ ಪುರಂದರ ವಿಠಲನ ತೋರೆ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು