ನಿಲ್ಲೆ ನಿಲ್ಲೆ ಕೊಲ್ಲಾಪುರ ದೇವಿಯೆ ಇಲ್ಲೆ ಬಾರೇ ಗೆಜ್ಜೆ ಘಲ್ಲೆನುತಾ - Nille Nille Kollapura Deviye

|| ಲಕ್ಷ್ಮಿ ಹಾಡು ||


ನಿಲ್ಲೆ ನಿಲ್ಲೆ ಕೊಲ್ಲಾಪುರ ದೇವಿಯೆ

ಇಲ್ಲೆ ಬಾರೇ ಗೆಜ್ಜೆ ಘಲ್ಲೆನುತಾ

 ಗೆಜ್ಜೆ ಘಲ್ ಘಲ್ ಎನುತಾ   || ಪ ||


ಕರುಣ ಸಾಗರ ಹರಿ ತರುಣಿಯೆ ನೀ ಕೋಟಿ

ಅರುಣ ಕಿರಣ ರತ್ನಾಭರಣವಿಟ್ಟು

ಮಣಿ ಕೌಸ್ತುಭ ವಕ್ಷ ಸ್ಥಳಡೊಳೊಪ್ಪುವ

ಸುವರ್ಣ ವಾಹನ ಲಕ್ಷ್ಮಿ ಶರಣು ವಂದಿತಳೆ || ೧ ||


ಪಂಕಜಾಕ್ಷಿ ಪಂಕಜೋದ್ಭವನ ಜನನಿ

 ಪಂಕಜ ಮುಖಿ ಪಾಲಿಸೆ ಎನ್ನ

 ಪಂಕಜ ನಾಭನ ಅಂಕಡೊಳೊಪ್ಪುವ

ಪಂಕಜ ನಿನ್ನ ಪಾದ ಪಂಕಜಕೆರಗುವೆ   || ೨ ||


 ಮುಗುಳು ನಗೆಯ ಮುತ್ತುಗಳ  ಜಡಿತ

 ಕರ್ಣ ವಾಲೆಗಳು  ಕದಪಿನೊಳ್ ಹೊಳೆಯೇ

 ಬಗೆಬಗೆ ಸರ ಬಂಗಾರ ವನಿಟ್ಟು|

ಮೂರ್ಜಗವ ಮೋಹಿಸುವ |

ಜಗದಾಧಿಪತಿಯ ರಾಣಿ ||೩ ||


ಸಾಗರದೊಳ್ ಹುಟ್ಯಾಗ ಶ್ರೀ ರಂಗನ |

ಬೇಗ ನೋಡಿ ಪಾರಾಮೋತ್ಸವದಿ |

ನಾಗ ಶಯನ ನಾಗಾರಿ ವಾಹನನ |

ಅರ್ಧಾಂಗಿ ಎನಿಸಿದ ಅನಂತ ಮಹಿಮಳೆ || ೪ ||


 ಶೇಷಗಿರಿಯ ಶ್ರೀನಿವಾಸನ ಎದೆಯಲಿ |

 ವಾಸವಾಗಿರಲತಿ ಪ್ರೇಮದಲಿ |

 ಈಶ ನಾರದ ಬ್ರಹ್ಮಾಸುರರೊಡೆಯ |

 ಭೀಮೇಶ ಕೃಷ್ಣನ ನಿಜ ದಾಸರಿಗೊರ ನೀಡೆ || ೫||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು