ಬಾರೆ ನಮ್ಮನಿತನಕ
ಬಾರೆ ನಮ್ಮನಿತನಕ ಭಾಗ್ಯದಾದೇವೀ,
ಬಾರೆ ನಮ್ಮನಿತನಕ, ಬಹು ಕರುಣದಿಂದಲಿ,
ಜೋಡಿ ಕರಗಳ ಎರಗುವೆ ಚರಣಕ್ಕೆ || ಪ ||
ಜರದ ಪೀತಾಂಬರ ನಿಲಿಗೆಗಳಲಿಯುತ,
ತರಳನ ಮ್ಯಾಲೆ ತಾಯಿ ಕರುಣಿಸಿ ಬೇಗನೆ || ೧ ||
ಹರಡಿ ಕಂಕಣದುಂಡು ಕರದಲ್ಲೇ ಹೊಳೆಯುತ,
ಸರಿಗಿ ಸರಹು ಚಂದ್ರ ಹಾರಗಳ್ ಅಲೆಯುತ || ೨ ||
ಮಂಗಳಾಂಗಿಯೇ ನಿನಗೊಂದಿಸಿ ಎರಗುವೆ,
ಇಂದಿರೇಶನ ಕೂಡಿ ಇಂದು ನಮ್ಮನಿತನಕ || ೩ ||
0 ಕಾಮೆಂಟ್‌ಗಳು