|| ಲಕ್ಷ್ಮಿ ಹಾಡು ||
ಇಂಥವಗ್ಹ್ಯಾಂಗೆ ಮನಸೋತೆ |
ಬಲು ಪಂತವನಾಡಿದ ಜಗನ್ಮಾತೆ || ಪ ||
ಆವಾಗ ಸಾರುವ ಮೈಯ ಮಾರಿ
ತೋರಿ ಆಡುವ ಕಾಲ ಕೈಯ
ಕೋರಿಯಿಂದೆತ್ತುತ್ತ ಕೊಸರಿಕೊಂಡಸುರನ |
ಪೋರನಿಗಾಗಿ ದೊಡ್ಡ ಧೀರನ ಸೀಳಿದ ॥೧॥
ಬಡ ಬ್ರಾಹ್ಮಣನೆಂದು ಬೇಡಿದ |
ತನ್ನ ಹಡೆದ ತಾಯಿಯ ಶಿರ ಕಡಿದ |
ಮಡದಿ ತಮ್ಮರು ಕೂಡಿ ಅಡವಿಯ ಸೇರಿದ ॥
ಕಡು ಗೋಪಿಗೊಲ್ಲರ ಭಾಧೆಯನಳಿಸಿದ ॥೨॥
ಬತ್ತಲೆ ನಿಂತಿದ್ದನಾಗ |
ತೇಜಿಹತ್ತಿ ಮೆರೆವ ನೀವ ಹೀಂಗ |
ಸಂತತ ಭಕುತರ ಸಲಹುವ ಹೆಳವನ ಕಟ್ಟಿ
ಇಂಥ ರಂಗಯ್ಯನಿಗೇನೆಂದು ಮನ ಕೊಟ್ಟೆ ॥೩॥
0 ಕಾಮೆಂಟ್‌ಗಳು