|| ಲಕ್ಷ್ಮಿ ಹಾಡು ||
ಬಂದಳೇ ನೋಡೆ ಭಾಗ್ಯದ ಲಕ್ಷ್ಮಿ ಮಂದಿರದೊಳಗೆ
ಭಾಗ್ಯದ ಲಕ್ಷ್ಮಿ ನೋಡೆ ಭಾಗ್ಯದ ಲಕ್ಷ್ಮಿ || ಪ ||
ಇಂದು ವದನೆ ಮಂದಹಾಸದಿ ಚೆಂದದಿ
ನಗುತಲಿ ನೋಡೆ || ಅ. ಪ.||
ಅಂದುಗೆ ರುಳಿ ಗೆಜ್ಜೆ ಕಾಲಂದುಗೆಯ ಘಲು
ಘಲು ಎನುತಲಿ ಪಾದವಿಕ್ಕುತ ಪದ್ಮನಾಭನ
ಅರಸಿ ನಗುತಲಿ || ೧ ||
ಎಡಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತಲಿ
ಬಿಡದೆ ತನ್ನ ಕರಗಳಿಂದ ವರವ
ಕೊಡುತಲಿ ನೋಡೇ || ೨ ||
ಸೃಷ್ಟಿಗೊಡೆಯ ತಂದೆ ಶ್ರೀ ಜಗನ್ನಾಥ ವಿಠಲನ
ಪಟ್ಟದರಸಿ ಅರ್ಥಿಯಿಂದಲಿ ಭಕ್ತರಾ ಮನೆಗೆ||೩||
0 ಕಾಮೆಂಟ್‌ಗಳು