ಸದ್ಗುರು ಸಾಕಿದ ಮದ್ದಾನಿ ಬರುತಿದೆ - Sadguru Sakida Maddani Barutide

 ಪರಮಾತ್ಕನ ಸಾಕ್ಷಾತ್ಕಾರದಿಂದುಂಟಾದ

                    ಆನಂದಪರವಶತೆ 

ರಾಗ-ಮಾಂಡ್ 

ತಾಲ-ಕೇರವಾ

kannadabhajanlyrics.com


ಸದ್ಗುರು ಸಾಕಿದ ಮದ್ದಾನಿ ಬರುತಿದೆ ।

ಎದ್ದು ಹೋಗಿರಿ ಇದ್ದ ನಿಂದಕರು || ಪ ||


ಬಿದ್ದು ಭವದೊಳು ಹೊರಳ್ಳಾಡು ಜನರನ್ನು ।

ಉದ್ಧಾರ ಮಾಡುತ ಬರುತಲಿದೆ || ಅ. ಪ. ||


ಆಕಾಶ ನೋಡುತ ವಾಯುವ ನುಂಗುತ |

ಝೇಂಕರಿಸುತಲದು ಬರುತಲಿದೆ ॥

ಒಂಕೀಲ ಹಿಡಿದು ಚೌಕ ಪೀಠದಿ ಬಂದು ।

ಆನಂದಭರಿತಾಗಿ ಬರುತಲಿದೆ   || ೧ ||


ಅಷ್ಟಮದಗಳೆಂಬೊ ದುಷ್ಟ ನೀಚರನೀಗ ।

ಶಿಟ್ಟಲೆ ಶೀಳ್ಯಾಡಿ ಬರುತಲಿದೆ ॥ 

ಹುಟ್ಟು ಸಾವುಗಳೆಂಬೊ ಹಾದಿ ಬಟ್ಟೆಯ ಕಟ್ಟ ।

ಸುಟ್ಟು ಕಾಮಕ್ರೋಧ ಬರುತಲಿದೆ   || ೨ ||


ಪ್ರಣಮಸ್ವರೂಪವ ಅನುದಿನ ನೋಡುತ । 

ಘನ ಸುಖದಲ್ಲಿದು ಬರುತಲಿದೆ ॥ 

ಪ್ರಣಯಿ ಕಲ್ಮೇಶನೊಳ್‌ ಮನ ಮಗ್ನವಂ ಮಾಡಿ ।

ಚಿನ್ಮಯಾತ್ಮನಾಗಿ ಬರುತಲಿದೆ      ॥೩॥ 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು