ರಾಗ : ಶ್ರೀ ರಾಗ
ತಾಳ : ಆದಿ
kannadabhajanlyrics.com |
ಶಾಂತನಾಗೋ ಮೂಢ ॥
ಸಂತತ ಬಹುವಿಧ । ಚಿಂತೆಯು ಪಟ್ಟಿಸಿ ।
ನಿಂತಿರುವಿ । ಮಲಯಂತ್ರವ ಮೋಹಿಸಿ ॥
॥ ಭ್ರಾಂತನಾಗಬೇಡ || ಪ.
॥ ಸ್ನಾನ ಹರಿಯಲಿಲ್ಲ|ಮಡಿಯ ವಿಧಾನ ದೊರೆಯಲಿಲ್ಲಾ ॥
ಮಾನವನೆಂಬಭಿ ದಾನವು ಬಂದರು ।
ದಾನದಿ ಹರಿಯು ವಿಧಾನವ ಕಾಣದೆ ||
ಭ್ರಾಂತನಾಗಬೇಡ ॥ ೧.
ಹರಕೆ ಮಾಣಲಿಲ್ಲಾ|ಕಣ್ಣಿಗೆ ಹರಿಯು ಕಾಣಲಿಲ್ಲಾ||
ಹರಿಹರ ನಾಮದ । ಶರೀರದೊಳಡಗಿಹ ।
ಸ್ಥಿರ ಚಿನ್ಮೂರ್ತಿಯ । ನರಿಯದೇ ॥
ಭ್ರಾಂತನಾಗಿಬೇಡ ॥ ೨.
॥ ಭಜನೆ ತೀರಲಿಲ್ಲಾ | ಜನ್ಮಗೆ ರುಜೆಗೆ ಪಾರವಿಲ್ಲಾ ।
ಅಜ ಹರಿ ರುದ್ರರ ॥ ಭಜನೆಗಳೆಂಬುದು ।
ಸುಜನರು ಪೇಳುವ । ನಿಜಕೆಂದರಿಯದೆ ॥
|| ಭ್ರಾಂತನಾಗಬೇಡ || ೩.
||ಖಂಡವಳಿಯಲಿಲ್ಲಾ|ತನ್ನೊಳ ಖಂಡ ಮೊಳೆಯಲಿಲ್ಲಾ॥
ಖಂಡಿಸಿ ನೀನಾರೆಂಬುದ ನರಿಯದೆ ।
ಭಂಡನಾಗಿ ಮಲಭಾಂಡವ ತೋರುತ ॥
|| ಭ್ರಾಂತನಾಗಬೇಡ ॥ ೪.
॥ವಳಗೆ ತೊಳೆಯಲಿಲ್ಲಾ|ಮನಸಿನ |ಕಳವಳ ಕೆಡಲಿಲ್ಲಾ॥
ಮೊಳೆಯುವ ಕುಲಛಲ । ಮನವನು ಸೆಳೆಯುವ ।
ಕುಲಗುರು ಶಂಕರನಡಿಗಳ ಪಿಡಿಯದೆ ॥
॥ ಭ್ರಾಂತನಾಗಬೇಡ ॥ ೫.
0 ಕಾಮೆಂಟ್‌ಗಳು