ಎಂಥ ಅಂದ ಎಂಥ ಚೆಂದ ಶಾರದಮ್ಮ - Entha Anda Entha Chanda Sharadamma

 || ಶಾರದಾ ಸ್ತುತಿ ||


ರಾಗ:ಮಧ್ಯಮಾವತಿ

ತಾಳ : ತ್ರಿಶ್ರ ನಡೆ 



ಎಂಥ ಅಂದ | ಎಂಥ ಚೆಂದ । ಶಾರದಮ್ಮ। ನಿನ್ನ

ನೋಡಲೆರಡು ಕಣ್ಣು ನಮಗೆ ಸಾಲದಮ್ಮ ॥ ನಿನ್ನ ॥ 

ಎಂಥ ಅಂದ ॥ 


॥ಇನ್ನು ಇನ್ನು ನೋಡುವಾಸೆ ತುಂಬಿತಮ್ಮ| ಇನ್ನು। 

ಕೋಟಿ ಜನುಮ । ಬರಲಿ ಎನಗೆ ಸಾಲದಮ್ಮ ॥ 

ಅಭಯಹಸ್ತ ನೋಡಿ ಜೀವ ಕುಣಿಯಿತಮ್ಮ|ನಿನ್ನ ॥

ಪಾದಕಮಲದಲ್ಲಿ । ಶಿರವು ಬಾಗಿತಮ್ಮ। ನಿನ್ನ ॥

ಎಂಥ ಅಂದ ॥ ೧.


॥ ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ | ನಿನ್ನ ॥

ನೋಡಿ ಹಾಡೋ ಆಸೆ ನನಗೆ ಬಂದಿತಮ್ಮ॥

ರತ್ನದಂಥ ಮಾತುಗಳನೆ ಆಡಿಸಮ್ಮ॥ ಒಳ್ಳೆ ॥

ರಾಗ ಭಾವ ಭಕ್ತಿತುಂಬಿ ಹಾಡಿಸಮ್ಮ ॥

ಎಂಥ ಅಂದ ॥ ೨.


ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ ॥ ನೀನು ॥

ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ॥

ಬೇರೆ ಏನು ಬೇಕು ಎ೦ದು ಕೇಳೆನಮ್ಮ ॥ ನಿನ್ನ ॥

ವೀಣೆತಂತಿ ಮಾಡಿ ನುಡಿಸು ಶಾರದಮ್ಮ ॥

ಎಂಥ ಅಂದ ॥ ೩.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು