ಶುಕ್ಕರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನು - shukkaravaradi Bhaktili Bhajisuve Lakkumi Deviyanu

 || ಲಕ್ಷ್ಮಿ ಹಾಡು ||



ಶುಕ್ಕರವಾರದಿ ಭಕ್ತಿಲಿ ಭಜಿಸುವೆ

ಲಕ್ಕುಮಿ ದೇವಿಯನು

ರುಕ್ಮಾಂಭರನ  ವಿಲಕ್ಷಣ ಶೋಭಿಪ

ಲಕ್ಷಣ ಮೂರ್ತಿಯನು || ಪ ||


 ರಕ್ಕಸ ರಿಪು ಬಲ ಪಕ್ಕದಿ ಕೂತಿಹ

 ರುಕ್ಮಿಣಿ ದೇವಿಯನು

 ರಕ್ಕಸ ರಿಪು ಎಡ ಪಕ್ಕದಿ ಕೂತಿಹ

 ಸತ್ಯಾ ದೇವಿಯನು  ||ಅ. ಪ.||


ಸಂತತ ಭಜಿಸುವ ಸಂತರ

ಹತ್ತಿರ ನಿಂತು ರಕ್ಷಿಸುತಿಹಳು ||

ಶಾಂತಳು ಸದ್ಗುಣವಂತಳು

ಕಮಲಾ ಕಾಂತನ ಸುಪ್ರಿಯಳು  

 ಕರವೀರ ಪ್ರಾಂತದೊಳ್ ಇರುತಿಹಳು

 ಹೃತ್ಕಮಲಾಂತರ ಸಂಸ್ಥಿತಳು   || ೧ ||


 ಸೀತೆಯು ತ್ರಿಜಗನ್ ಮಾತೆಯು

 ಕ್ಷೀರಾಬ್ಧಿ ಜಾತೆಯು ಪರಮ ಶ್ರೀ

 ದಾತೆಯು ಮಾಧವ ಭೂತಿಯು

 ಮಂಗಳ ಮೂರ್ತಿಯು ಸುಖದ ರಾಶಿಯು || ೨ ||


ಆಶ್ಯಾಂಬುಜ  ತನು ಹಾಸ ಸು

ಕುಂತಲ ಭೂಷಿತ ಬಿಂಭೋಷ್ಟಿ

 ಕೂಸಿಗೆ ಕೊಡು ಇಂದಿರೇಶನ ಸಹಜ

ಗಧೀಶಲೆ  ತವ ಭೆಟ್ಟಿ ಅಮ್ಮಾ  || ೩ ||



 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು